ಸುಂಟಿಕೊಪ್ಪ, ಮಾ. 15: ಸಣ್ಣ ನೀರಾವರಿ ಇಲಾಖೆಯಿಂದ ಐಗೂರು ಗ್ರಾಮದ ಯಡವಾರೆಯಲ್ಲಿ ಕೃಷಿಕರಿಗೆ ನಾಲೆ ಕಾಮಗಾರಿ ನಡೆಸುತ್ತಿದ್ದು, ಅರ್ಧದಲೇ ಕೆಲವರ ಚಿತಾವಣೆ ಯಿಂದ ನಿಂತಿದೆ. ಈ ಇಲಾಖೆ ಯಿಂದ ನಿರ್ಮಿಸಿದ ರಸ್ತೆಯನ್ನು ಟಿಂಬರ್ ಸಾಗಿಸಿ ಹಾಳುಗೆಡುವ ಲಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳ ಬೇಕೆಂದು ಯಡವಾರೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಭತ್ತದ ಗದ್ದೆ ಮಾಡುವ ಐಗೂರು, ಯಡವಾರೆ, ಹೊರವಾಳೆ ಜನರಿಗೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಈ ನಾಲೆ ವರದಾನವಗಿತ್ತು. ನೂರಾರು ವರ್ಷಗಳಿಂದ ಈ ನಾಲೆಯ ನೀರಿನಿಂದ ಕೃಷಿಕರು ಬದುಕು ಕಟ್ಟಿಕೊಂಡಿದ್ದರು. ಆನೇಕ ವರ್ಷಗಳ ಕಾಲ ನಾಲೆ ರಿಪೇರಿ ನಡೆದಿರಲಿಲ್ಲ ಆದರೆ ಗ್ರಾಮಸ್ಥರ ಒತ್ತಾಯದ ಮೇರೆಗೆ ನಾಲೆಯ ಹೂಳು ತೆಗೆದು ತಡೆಗೋಡೆ ನಿರ್ಮಿಸಿ ನಾಲೆಗೆ ಕಾಯಕಲ್ಪ ನೀಡಲಾಗಿತ್ತು.
ಐಗೂರುನಿಂದ ಯಡವಾರೆ ಗ್ರಾಮದ ಬಸವೇಶ್ವರ ದೇವಸ್ಥಾ&divound; Àವರೆಗೆ ಹೂಳು ತೆಗೆದು ರಸ್ತೆಯನ್ನು ನಿರ್ಮಿಸಲಾಗಿತ್ತು. ಏತನ್ಮದ್ಯೆ ತೋಟದ ಮರಗಳನ್ನು ಕಡಿದು ಸಾಗಿಸಿದ್ದರಿಂದ ರಸ್ತೆ ಹಾಳಾಗಿದೆ. ಇಲಾಖೆಯವರು ಕಾಮಗಾರಿ ಅರ್ಧದಲ್ಲೆ ನಿಲ್ಲಿಸಿದ್ದಾರೆ. ರಸ್ತೆ ಹಾಳಾಗಿದ್ದರಿಂದ ಮಳೆಗಾಲದಲ್ಲಿ ಸ್ಥಳೀಯರ ಪಾಡು ಹೇಳತೀರದಾಗಿದೆ.
ಸಣ್ಣ ನೀರಾವರಿ ಇಲಾಖೆಗೆ ಸೇರಿದ ನಾಲೆಯ ಒತ್ತುವರಿ ಯಾಗಿದೆ. ಈ ಬಗ್ಗೆ ಪರಿಶೀಲಿಸಿ ನ್ಯಾಯ ಒದಗಿಸಬೇಕೆಂದು ಕೆ.ಆರ್. ಸಂಕೇತ್, ಕೆ.ಕೆ. ಬೋಜಪ್ಪ, ಕೆ.ಬಿ. ಅವಿನಾಶ್, ಕುಸುಮಾವತಿ, ಲೀಲಾವತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.