ಮಡಿಕೇರಿ, ಮಾ.14 : ನೂತನವಾಗಿ ಆಯ್ಕೆಯಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಒಳಿತಿಗಾಗಿ ಹಾಗೂ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಪ್ರಾರ್ಥಿಸಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಹಾಗೂ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭುರೈ ನೇತೃತ್ವದಲ್ಲಿ ನಗರದ ಶ್ರೀಕೋಟೆ ಮಹಾಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.
ಪೂಜೆಯಲ್ಲಿ ಪಾಲ್ಗೊಂಡಿದ್ದ ವಿಧಾನಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಮಾತನಾಡಿ ಡಿ.ಕೆ. ಶಿವಕುಮಾರ್ ಅವರು ಎಲ್ಲಾ ವರ್ಗದ ಜನನಾಯಕರಾಗಿದ್ದು, ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿ ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ವಿ.ಪಿ. ಶಶಿಧರ್ ಮಾತನಾಡಿ, ಶಿವಕುಮಾರ್ ಅವರು ಯುವ ಸಮೂಹದ ಭರವಸೆಯ ನಾಯಕರಾ ಗಿದ್ದು, ಇವರ ಉನ್ನತಿಗಾಗಿ ಹಾಗೂ ಸಾರ್ವಜನಿಕರ ಆರೋಗ್ಯಕ್ಕಾಗಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವಿಶೇಷ ಪೂಜೆ ಸಲ್ಲಿಸಿರುವುದು ಅರ್ಥಗರ್ಭಿತವೆಂದರು.
ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ನಿರ್ವಿಘ್ನ ವಾಗಿ ಮುನ್ನಡೆದು ಅಧಿಕಾರದ ಗದ್ದುಗೆಯನ್ನೇರಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ಕೊಡಗಿನ ದಿನೇಶ್ ಗುಂಡೂರಾವ್ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು ಮತ್ತು ದೇಶದಲ್ಲಿ ಕೊರೊನಾ ಭೀತಿ ದೂರವಾಗಲಿ ಎಂದು ಮೈನಾ ಪ್ರಾರ್ಥಿಸಿದರು.
ಕಾಂಗ್ರೆಸ್ ಪ್ರಮುಖ ಕೆ.ಎಂ. ಲೋಕೇಶ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ನಗರಸಭಾ ಮಾಜಿ ಉಪಾಧ್ಯಕ್ಷ ಟಿ.ಎಂ. ಅಯ್ಯಪ್ಪ, ಮಾಜಿ ಸದಸ್ಯರುಗಳಾದ ಪ್ರಕಾಶ್ ಆಚಾರ್ಯ, ಸುನೀಲ್ ನಂಜಪ್ಪ, ಕೆ.ಎಂ. ವೆಂಕಟೇಶ್, ಪ್ರಮುಖರಾದ ಪುಲಿಯಂಡ ಜಗದೀಶ್, ರವಿಗೌಡ, ಕೇಟೋಳಿ ಮೋಹನ್ ರಾಜ್, ನಂದಿನೆರವಂಡ ಮಧು, ಡಿಕೆಶಿ ಅಭಿಮಾನಿ ಸಂಘದ ಜಿಲ್ಲಾ ಅಧ್ಯಕ್ಷ ನವೀದ್ ಖಾನ್, ತಾಲೂಕು ಅಧ್ಯಕ್ಷ ರಿಜ್ವಾನ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಜಗದೀಶ್, ಪರಿಶಿಷ್ಟ ಘಟಕದ ಅಧ್ಯಕ್ಷ ಮುದ್ದುರಾಜ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಅರ್ಚಕÀ ಅರುಣಭಟ್ ಪೂಜಾ ಕಾರ್ಯ ನೆರವೇರಿಸಿದರು.
ಮಂಜುನಾಥನ ಮೊರೆ
ಸೋಮವಾರಪೇಟೆ: ಕೊರೊನಾ ವೈರಸ್‍ನಿಂದ ಮನುಷ್ಯರಾಶಿಯನ್ನು ಪಾರು ಮಾಡುವಂತೆ ದೇವರಲ್ಲಿ ಮೊರೆಯಿಡಲಾಯಿತು.
ಅರಸಿನಕುಪ್ಪೆ - ಸಿದ್ಧಲಿಂಗಪುರದ ಶ್ರೀಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಆಯೋಜಿಸಲಾಗಿದ್ದ ಪಂಚಮಿ ಪೂಜೋತ್ಸವದಲ್ಲಿ ಕೊರೊನಾ ವೈರಸ್‍ನಿಂದ ಜಗತ್ತನ್ನು ಪಾರು ಮಾಡುವಂತೆ ದೇವಾಲಯದ ಪ್ರಧಾನ ಗುರು ರಾಜೇಶ್ ನಾಥ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ನಂತರ ಶ್ರೀಮಂಜುನಾಥ ಸನ್ನಿಧಿಯಲ್ಲಿ ಶ್ರಿಗಣಪತಿ ಹೋಮ, ವಿವಿಧ ಅಭಿಷೇಕ, ಮಹಾಮಂಗಳಾ ರತಿ ನಡೆಯಿತು. ಶ್ರೀ ನವನಾಗ ಸನ್ನಿಧಿಯಲ್ಲಿ ಪಂಚಮಿ ಅಂಗವಾಗಿ ತಂಬಿಲ ಸೇವೆ, ಅಲಂಕಾರ ಪೂಜೆ, ಮಹಾಮಂಗಳಾರತಿ ನಂತರ ಸಾರ್ವಜನಿಕ ಭಕ್ತಾದಿ ಗಳಿಗೆ ಅನ್ನಸಂತರ್ಪಣೆ ನಡೆಯಿತು.
ದೇವಾಲಯದ ಪ್ರಧಾನ ಅರ್ಚಕ ಜಗದೀಶ್ ಉಡುಪ ಪೌರೋಹಿತ್ವದಲ್ಲಿ ಅರ್ಚಕ ಪ್ರಸಾದ್ ಭಟ್, ವಾದಿರಾಜ್ ಭಟ್, ಮೋಹನ್, ಪ್ರಭಾಕರ್ ಅವರುಗಳು ಪೂಜಾಕಾರ್ಯ ನೆರವೇರಿಸಿದರು.
ಪೆರಾಜೆಯಲ್ಲಿ ಪ್ರಾರ್ಥನೆ
ಪೆರಾಜೆ : ಇಲ್ಲಿಯ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಸಂಕ್ರಮಣ ದಿನದಂದು ಲೋಕ ಕಲ್ಯಾಣಕ್ಕಾಗಿ ಹಾಗೂ ಕೊರೊನಾ ಸೋಂಕಿನಿಂದ ಇಡೀ ದೇಶವನ್ನು ರಕ್ಷಿಸಬೇಕು ಎಂದು ದೇವರಲ್ಲಿ ಸಾಮೂಹಿಕವಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಈ ಸಂದÀರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ, ಆಡಳಿತ ಕಾರ್ಯ ದರ್ಶಿ ಹೊನ್ನಪ್ಪ ಕೊಳಂಗಾಯ, ಮಡಿಕೇರಿ ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾ.ಪಂ. ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ದೇವಸ್ಥಾನದ ಪ್ರಧಾನ ಅರ್ಚಕ ಕೆ. ವೆಂಕಟ್ರಮಣ ಪಾಂಗಣ್ಣಾಯ, ಬೋಜಪ್ಪ ಪೆರುಮುಂಡ, ಹೊನ್ನಪ್ಪ ಅಮೆಚೂರು ಸೇರಿದಂತೆ ಭಕ್ತರು ಸೇರಿದ್ದರು.