ನನ್ನ ಅಜ್ಜಿ ಹೀಗೆ ಹೇಳುತ್ತಿದ್ದರು. ‘‘ಮಗು ಒಂದು ಊರಿನಲ್ಲಿ ಒಬ್ಬ ರಾಜನಿದ್ದ, ಅವನಿಗೆ ಒಬ್ಬಳು ಮಗಳು ಮತ್ತು ಒಬ್ಬ ಮಗನಿದ್ದ. ಅವನು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಸುಖವಾಗಿದ್ದ. ಹಿಂದೆ ಕಾಲಕಾಲಕ್ಕೆ ಉತ್ತಮ ಮಳೆಯಾಗುತ್ತಿತ್ತು. ತಾನು ಬೆಳೆದ ಧವಸ ದಾನ್ಯಗಳನ್ನು ಬಡವರಿಗೆ ಹಂಚಿ ಅವರ ಕಷ್ಟದಲ್ಲಿ ಭಾಗಿಯಾಗುತ್ತಿದ್ದರು. ಸಕಾಲಕ್ಕೆ ಮಳೆಯಾಗ ಬೇಕಾದರೆ ಮರ-ಗಿಡಗಳನ್ನು ಬೆಳೆಸಿ ಪೋಷಿಸುವದರ ಜೊತೆಗೆ ಬೇರೆಯವರ ಕೊಡಲಿ ಏಟಿಗೆ ಮರಗಳು ಬಲಿಯಾಗದಂತೆ ನೋಡಿಕೊಳ್ಳಬೇಕು ಎಂದು ಕತೆ ಹೇಳುತ್ತಿದ್ದರು.

ನಾನು ಹೀಗೆ ಕಾಲುದಾರಿಯಲ್ಲಿ ನಡೆಯುತ್ತಾ ಅಮ್ಮ ಕೊಟ್ಟಿದ್ದ ಒಂದು ಕಬ್ಬಿನ ತುಂಡನ್ನು ಜಗಿಯುತ್ತಾ ಹಾಲು ತರಲೆಂದು ಹೋಗುತ್ತಿದ್ದೆ, ದಾರಿಯ ಇಕ್ಕೆಡೆಗಳಲ್ಲೂ ದೊಡ್ಡ-ದೊಡ್ಡ ಮರಗಳು ಮತ್ತು ಪೊದೆ ಅದರ ಮಧ್ಯದಲ್ಲಿ ಹಕ್ಕಿಗಳ ಕಲರವ ‘‘ಕೆಲವೆಡೆ ಝುಳು-ಝುಳು ನೀರಿನ ಸಿಂಚನ, ‘‘ಎಲ್ಲೆಡೆ ಹಸಿರಿನ, ತಂಪಾದ ಕಾನನ’’ ಎಂದು ಮನದೊಳಗೆ ತನಗೆ ತಾನೆ ಹೇಳಿಕೊಳ್ಳುತ್ತಾ ಹೊರಟೆ ಸ್ವಲ್ಪ ದೂರದಲ್ಲಿ ಸರಸರ ಸದ್ದು ಕೇಳಿಸಿದಂತಾಯಿತು. ಮುಂದೆ ಹೋಗಿ ನೋಡಿದೆ, ಆಗ ಐದಾರು ಜನರ ಗುಂಪೊಂದು ಅಲ್ಲೇ ಹತ್ತಿರದಲ್ಲಿದ್ದ ಬಂಡೆಯೊಂದರ ಪಕ್ಕ ಅಡಗಿ ಕುಳಿತರು. ನಾನು 5 ನಿಮಿಷ ಮರದ ಮರೆಯಲ್ಲಿ ಅಡಗಿ ಸದ್ದಿಲ್ಲದೆ ಕುಳಿತೆ ಒಬ್ಬಾತ ಇಣುಕಿ ನೋಡುತ್ತಾ ಹೊರಬಂದ ಮೈತುಂಬಾ ಕಪ್ಪು ವಸ್ತ್ರ ಧರಿಸಿದ್ದ ಕಣ್ಣು ಮಾತ್ರ ಕಾಣುವಂತೆ ಟೊಪ್ಪಿ ಹಾಕಿಕೊಂಡಿದ್ದ ಅಷ್ಟರಲ್ಲಿ ಅಜ್ಜಿ ಹೇಳಿದ್ದು ನೆನಪಾಯಿತು. ಈ ಮರಗಳ್ಳರನ್ನು ಬಿಟ್ಟರೆ ಮರಗಳು ನೆಲಕಚ್ಚಿ ಇನ್ನಷ್ಟು ಬಂಗಲೆಗಳು, ರೆಸಾರ್ಟ್‍ಗಳು ಆ ಸ್ಥಳದಲ್ಲಿ ಎದ್ದು ನಿಲ್ಲುತ್ತದೆ, ಮುಂದೆ ಅನಾಹುತ ತಪ್ಪಿದ್ದಲ್ಲ, ರೆಸಾರ್ಟ್‍ಗಳು, ಮನೆಗಳನ್ನು ಕಾಡು ಮತ್ತು ಬೆಟ್ಟದ ಮೇಲೂ ಬಿಡದೆ ಕಟ್ಟಿರುವದರಿಂದ ಕಳೆದೆರಡು ವರ್ಷಗಳಿಂದ ಮನೆ-ಮಠಗಳು ಉರುಳಿ ನೆಲಸಮಗೊಂಡು ಮಾನವ ಬೀದಿ ಪಾಲಾಗಿದ್ದಾನೆ’’ ಎಂದು ಯೋಚಿಸಿ, ಮೆಲ್ಲನೆ ಅಲ್ಲೇ ಪಕ್ಕದಲ್ಲಿ ತಂಪು ಪಾನೀಯಗಳನ್ನು ಮಾರುತ್ತಿದ್ದ ಅಂಗಡಿಯವನೊಂದಿಗೆ