ಸೋಮವಾರಪೇಟೆ, ಮಾ.13: ಮರಗಸಿ ಮಾಡುವ ಸಂದರ್ಭ ಕಾರ್ಮಿಕನಿಗೆ ವಿಷಪೂರಿತ ಹಾವು ಕಚ್ಚಿರುವ ಘಟನೆ ಪಟ್ಟಣ ಸಮೀಪದ ಚೌಡ್ಲು ಗ್ರಾಮದಲ್ಲಿ ನಡೆದಿದೆ.
ಚೌಡ್ಲು ಗ್ರಾಮದ ನಿವಾಸಿ ಕಾರ್ಮಿಕ ರವಿ ಹಾವು ಕಡಿತಕ್ಕೊಳಗಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಚೌಡ್ಲು ಗ್ರಾಮದ ರಾಜು ಎಂಬವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.