ಸಿದ್ದಾಪುರ, ಮಾ. 13: ಸೇವಾ ಸಂಸ್ಥೆಗಳು ಸೇವಾ ಕಾರ್ಯಕ್ರಮಗಳನ್ನು ಪ್ರೀತಿ ಮಮಕಾರದಿಂದ ಮಾಡುವಂತ ಗಾಬೇಕು ಎಂದು ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ರೋನಾಲ್ಡ್ ಗೋಮ್ಸ್ ಹೇಳಿದರು.
ಅಮ್ಮತಿ ಲಯನ್ಸ್ ಕ್ಲಬ್ ಅಶ್ರಯದಲ್ಲಿ ಕೊಡವ ಅಸೋಶಿಯೆಷನ್ ಕ್ಲಬ್ ಸಭಾಂಗಣ ಒಂಟಿಯಂಗಡಿ ಅಮತ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು; ಲಯನ್ಸ್ ಸಂಸ್ಥೆಯ 100 ಕ್ಕಿಂತ ಮಿಗಿಲಾದ ದೇಶಗಳಲ್ಲಿ ತನ್ನ ಸೇವಾ ಕಾರ್ಯವನ್ನು ವಿಸ್ತರಿಸಿ ಕೊಂಡು ಪ್ರಪಂಚದಲ್ಲೇ ಉತ್ತಮವಾದ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಸಂಸ್ಥೆಯು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಮಾಜಿಕ ಚಿಂತನೆಯೊಂದಿಗೆ ಸಾಗಿದೆ ಎಂದರು.
ಅಮತ್ತಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ನಡಿಕೇರಿಯಂಡ ಜ್ಯೋತಿ ಪೊನ್ನಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆ ವತಿಯಿಂದ ಪ್ರಸ್ತುತ ಸಾಲಿನಲ್ಲಿ ಅಮತ್ತಿ ಭಾಗದ ಜನತೆಗೆ ದಂತ ಚಿಕಿತ್ಸಾ ಶಿಬಿರವನ್ನು ಅಯೋಜನೆ ಮಾಡಲಾಗಿತ್ತು.
ಪ್ರೌಢಶಾಲೆಯಲ್ಲಿ ನಡೆದ ಎನ್.ಎಸ್.ಎಸ್. ಶಿಬಿರದಲ್ಲಿ ಮತ್ತು ಆನೆಚೌಕೂರುವಿನ ಅರಣ್ಯ ವ್ಯಾಪ್ತಿಯಲ್ಲಿ ಪರಿಸರ ಸಂರಕ್ಷಣೆಗೆ ಪೂರಕವಾಗಿ ಸಸಿಗಳ ನೆಡಲಾಯಿತು. ಅಮತ್ತಿ ಪೊಲೀಸ್ ಉಪಠಾಣೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣ ದಲ್ಲಿ ಸ್ವಚ್ಛ ಭಾರತ್ ಕಾರ್ಯಕ್ರಮ ಅಂಗವಾಗಿ ಶ್ರಮ ದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದರು.
ಸಂಸ್ಥೆಯ ಕಾರ್ಯದÀರ್ಶಿ ಸವಿತ ಬೋಪಣ್ಣ ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು.
ವೇದಿಕೆಯಲ್ಲಿ ಅನಿತಾ ಗೋಮ್ಸ್, ಜೆ.ಸಿ ಶೇಖರ್, ಎಂ.ಜೆ.ಎಫ್. ನವೀನ್ ಕಾರ್ಯಪ್ಪ, ಅಮತ್ತಿ ಲಯನ್ಸ್ ಸಂಸ್ಥೆಯ ಖಜಾಂಚಿ ರಕ್ಷಿತಾ ಅಯ್ಯಪ್ಪ, ವಲಯ ಸಭಾಧ್ಯಕ್ಷ ಶಾಶ್ವತ್ ಬೋಪಣ್ಣ, ಪ್ರದೇಶ ಸಭಾಧ್ಯಕ್ಷ ಪಿ.ಪಿ. ಸೋಮಣ್ಣ, ಮತ್ತಿತರರು ಉಪಸ್ಥಿತರಿದ್ದರು.
ತಾನ್ಯ ಕಾರ್ಯಪ್ಪ ಪ್ರಾರ್ಥಿಸಿ, ಜ್ಯೋತಿ ಪೊನ್ನಪ್ಪ ಸ್ವಾಗತಿಸಿ, ಸವಿತ ಚೆಂಗಪ್ಪ ವಂದಿಸಿದರು.