ಬಾಡಗರಕೇರಿ, ಮಾ. 13: ಬಾಡಗರಕೇರಿಯಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ಮಾರ್ಚ್ 5 ರಿಂದ ಪ್ರಾರಂಭಗೊಂಡಿದ್ದು ಹಾಗೂ ತಾ. 15 ರಂದು (ನಾಳೆ) ಉತ್ಸವದ ಅಂತಿಮ ವಿಧಿವಿಧಾನಗಳು ಜರುಗಲಿವೆ.
ತಾ. 14 ರಂದು (ಇಂದು) ಬೆಳಿಗ್ಗೆ 11 ರಿಂದ ನಿತ್ಯಪೂಜೆ, 12 ಗಂಟೆಗೆ ತುಲಾಭಾರ, ಸಂಜೆ 5 ಗಂಟೆಗೆ ನೆರಪು, ರಾತ್ರಿ 8 ಗಂಟೆಗೆ ಶ್ರೀ ವಿಷ್ಣುದೇವರ ಅಲಂಕಾರ ಪೂಜೆ ಜರುಗಲಿದೆ. ತಾ. 15 ರಂದು (ನಾಳೆ) ಬೆ. 10 ರಿಂದ ನಿತ್ಯಪೂಜೆ, 12 ಗಂಟೆಗೆ ತುಲಾಭಾರ, 3 ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವದು, ಸಂಜೆ 5ಕ್ಕೆ ಉತ್ಸವಮೂರ್ತಿ ದರ್ಶನ, ದೇವರ ಅವಭೃತ ಸ್ನಾನ, ರಾತ್ರಿ ಮತ್ತೆ ಉತ್ಸವಮೂರ್ತಿ ದರ್ಶನ ಹಾಗೂ ವಸಂತ ಪೂಜೆ ಜರುಗಲಿದೆ.
ಈ ಬಾರಿ ಕೊರೊನಾ ರೋಗದ ಆತಂಕವಿರುವ ಹಿನ್ನೆಲೆಯಲ್ಲಿ ಉತ್ಸವದ ಸಂದರ್ಭ ಐಸ್‍ಕ್ರೀಂ, ಐಸ್‍ಕ್ಯಾಂಡಿ ಯಂತಹ ಪದಾರ್ಥಗಳ ಮಾರಾಟಕ್ಕೆ ಅವಕಾಶ ನೀಡಲಾಗುವದಿಲ್ಲ ಎಂದು ಆಡಳಿತ ಮಂಡಳಿ ಪ್ರಮುಖರು ತಿಳಿಸಿದ್ದಾರೆ.