ವೀರಾಜಪೇಟೆ, ಮಾ. 13: ವೀರಾಜಪೇಟೆ ಮೀನುಪೇಟೆ ಯಲ್ಲಿರುವ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಸ್ಥಾನದ 76ನೇ ವರ್ಷದ ಮುತ್ತಪ್ಪ ತೆರೆ ಮಹೋತ್ಸವವನ್ನು ತಾ. 17 ರಿಂದ 19 ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಇ.ಸಿ. ಜೀವನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾ. 17 ರಂದು ಪ್ರಾತ:ಕಾಲ 5 ಗಂಟೆಗೆ ಗಣಪತಿ ಹೋಮದೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಸಂಜೆ 5 ಗಂಟೆಗೆ ಮುತ್ತಪ್ಪ ವೆಳ್ಳಾಟಂ, ಧ್ವಜಾರೋಹಣ, ರಾತ್ರಿ 8-30 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ತಾ. 18 ರಂದು ಸಂಜೆ 5 ಗಂಟೆಗೆ ಸುಂಕದ ಕಟ್ಟೆಯಿಂದ ಮೊದಲ ಕಲಶದ ತಾಲಪೊಲಿ ಚಂಡೆಮೇಳದ ಸಮೇತ ಮೆರವಣಿಗೆ ಯೊಂದಿಗೆ ದೇವಾಲಯಕ್ಕೆ ಆಗಮಿಸುವುದು.

ಸಂಜೆ 6 ಗಂಟೆಯಿಂದ ಮುತ್ತಪ್ಪ ವೆಳ್ಳಾಟಂ, ಕುಟ್ಟಿಚಾತನ್, ಗುಳಿಗನ್, ವಸೂರಿ ಮಾಲ, ಪೊದಿ ವಿಷ್ಣುಮೂರ್ತಿ ವೆಳ್ಳಾಟಂ ರಾತ್ರಿ 8 ಗಂಟೆಗೆ ಅನ್ನದಾನ ನಡೆಯಲಿದೆ.

ತಾ. 19 ರಂದು ಪ್ರಾತ:ಕಾಲ 1 ಗಂಟೆಗೆ ಶಾಸ್ತಪ್ಪನ್ ಹಾಗೂ ಗುಳಿಗನ ಕೋಲ, ಪ್ರಾತಕಾಲ 4 ಗಂಟೆಗೆ ತಿರುವಪ್ಪನ್, 8 ಗಂಟೆಗೆ ಭಗವತಿ ಪೋದಿ, 10 ಗಂಟೆಗೆ ವಸೂರಿ ಮಾಲ, 11 ಗಂಟೆಗೆ ವಿಷ್ಣು ಮೂರ್ತಿ ಕೋಲ, 3 ಗಂಟೆಗೆ ವಿಷ್ಣುಮೂರ್ತಿ ಕೋಲದೊಂದಿಗೆ ಉತ್ಸವ ಮುಕ್ತಾಯ ಗೊಳ್ಳಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಟಿ.ಕೆ. ರಾಜನ್ (ಪುಷ್ಪನ್) ಉಪಾಧ್ಯಕ್ಷ ಟಿ.ಎಸ್. ಗೋವಿಂದನ್, ಸಹ ಕಾರ್ಯದರ್ಶಿ ಸಜೀವನ್, ಖಜಾಂಚಿ ಪಿ.ಕೆ. ಕೃಷ್ಣಕುಟ್ಟಿ ಉಪಸ್ಥಿತರಿದ್ದರು.