ಚೆಟ್ಟಳ್ಳಿ, ಮಾ. 13: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ, ಸೌದಿ ಅರೇಬಿಯಾ, ಒಮಾನ್, ಕುವೈತ್ ಹಾಗೂ ಬಹರೈನ್ ಸೇರಿದಂತೆ ಎಲ್ಲಾ ಗಲ್ಫ್ ರಾಷ್ಟ್ರಗಳಲ್ಲಿ ಸಮಾಜಮುಖಿ ಸೇವೆಯಲ್ಲಿ ತೊಡಗಿದ್ದು, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ತನ್ನ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸುವ ಸಲುವಾಗಿ ನೂತನವಾಗಿ ಖತರ್ ರಾಷ್ಟ್ರೀಯ ಸಮಿತಿಯನ್ನು ರಚಿಸಿದ್ದು ಇದರ ನೂತನ ಅಧ್ಯಕ್ಷರಾಗಿ ಅಬ್ಬಾಸ್ ಸಖಾಫಿ ಬಲಮುರಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಶಿಹಾಬ್ ಕೊಳಕೇರಿ, ಉಪಾಧ್ಯಕ್ಷರಾಗಿ ಹುಸೈನ್ ಕಂಡಕರೆ, ಶಾಹುಲ್ ಹಮೀದ್ ವೀರಾಜಪೇಟೆ, ಸಹ ಕಾರ್ಯದರ್ಶಿಯಾಗಿ ಉಮ್ಮರ್ ಮಾದಾಪುರ, ಖಲೀಲ್ ನಾಪೋಕ್ಲು, ಕೋಶಾಧಿಕಾರಿಯಾಗಿ ನಝೀರ್ ಮೂರ್ನಾಡು, ಕಾರ್ಯಾಧ್ಯಕ್ಷರಾಗಿ ಬಶೀರ್ ಕೊಂಡಂಗೇರಿ ಆಯ್ಕೆಯಾಗಿದ್ದಾರೆ.

ಖತರ್ ಮದೀನ ಮುರ್ರ ಹೊಟೇಲ್‍ನಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಅಹ್ಮದ್ ಕತ್ತಕೊಂಡಂಗೇರಿ ವಹಿಸಿದ್ದರು. ನೂತನ ಅಧ್ಯಕ್ಷ ಅಬ್ಬಾಸ್ ಸಖಾಫಿ ಬಲಮುರಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ, ಸ್ವಲಾತ್ ಮಜ್ಲಿಸ್‍ಗೆ ನೇತೃತ್ವವನ್ನು ವಹಿಸಿದ್ದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಇದರ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕರೆ ಸಂಘಟನೆಯ ಕಾರ್ಯಚಟುವಟಿಕೆಯ ಬಗ್ಗೆ ತರಗತಿ ಹಾಗೂ ನೂತನ ಸಮಿತಿ ರಚನೆಯ ನೇತೃತ್ವವನ್ನು ವಹಿಸಿದ್ದರು.

ಶಾಹುಲ್ ಹಮೀದ್ ವೀರಾಜಪೇಟೆ, ಉಮ್ಮರ್ ಮಾದಾಪುರ ಹಾಗೂ ದಾವೂದ್ ತಾವೂರು ಇದ್ದರು. ನಝೀರ್ ಮೂರ್ನಾಡು ಸ್ವಾಗತಿಸಿ, ಶಿಹಾಬ್ ಕೊಳಕೇರಿ ವಂದಿಸಿದರು.