ಮಡಿಕೇರಿ, ಮಾ. 13: ಗೋಣಿಕೊಪ್ಪಲು ಸಮೀಪದ ಅರ್ವತೊಕ್ಲುವಿನ ಕಾಡ್ಲಯ್ಯಪ್ಪ ದೇವರ ವಾರ್ಷಿಕ ಉತ್ಸವ ತಾ. 14 ಹಾಗೂ 15 ರಂದು ನಡೆಯಲಿದೆ. ತಾ. 14ರಂದು (ಇಂದು) ಇಲ್ಲಿನ ತಕ್ಕರ ಮನೆಯಿಂದ ಭಂಡಾರ ಇಳಿಯುವುದು ಹಾಗೂ ಮನೆಕಳಿ ನಡೆಯಲಿದೆ. 15 ರಂದು ಬೆಂಕಿ ಕೊಂಡ ಹಾಯುವ ದೊಡ್ಡ ಹಬ್ಬ ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.