ಕಾವೇರಿ ಕಾಲೇಜು ವಿಜೇತರು

ವೀರಾಜಪೇಟೆ, ಮಾ. 12: ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ಕ್ರಿಕೆಟ್ ತಂಡವು ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಆಕರ್ಷಕ ಟ್ರೋಫಿ ಹಾಗೂ ರೂ. 5000 ನಗದು ಬಹುಮಾನವನ್ನು ಗೆದ್ದುಕೊಂಡಿದೆ. ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಜಿತನ್, ಉದಯೋನ್ಮುಖ ಆಟಗಾರರಾಗಿ ಅಭಿಜಿತ್ ಹಾಗೂ ಪಂದ್ಯಾವಳಿಯ ಶ್ರೇಷ್ಠ ಆಟಗಾರರಾಗಿ ಹರೀಶ್ ಪ್ರಶಸ್ತಿ ಪಡೆದುಕೊಂಡರು.