ಸೋಮವಾರಪೇಟೆ, ಮಾ. 12: ಬೇಳೂರು ವಲಯ ಕಾಂಗ್ರೆಸ್ ಸಭೆಯು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಅವರ ಅಧ್ಯಕ್ಷತೆಯಲ್ಲಿ, ಸಮೀಪದ ಬಜೆಗುಂಡಿ ಗ್ರಾಮದ ಸಮುದಾಯ ಭವನದಲ್ಲಿ ನಡೆಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್, ಕಾಂಗ್ರೆಸ್ ಪಕ್ಷವನ್ನು ಗ್ರಾಮೀಣ ಮಟ್ಟದಲ್ಲಿ ಸಂಘಟಿಸುವ ಮೂಲಕ ಪ್ರಬಲವಾಗಿ ರೂಪುಗೊಳಿಸಬೇಕು. ಆ ಮೂಲಕ ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವಂತಾಗಬೇಕು ಎಂದರು.

ಇದೇ ಸಂದರ್ಭ ಬೇಳೂರು ವಲಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಕೆ.ಪಿ. ಕುಮಾರ್ ಅವರನ್ನು ನೇಮಕಗೊಳಿಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್, ಬೂತ್ ಸಮಿತಿ ಅಧ್ಯಕ್ಷರುಗಳನ್ನಾಗಿ ಅಣ್ಣಪ್ಪ, ಬಿ.ಎನ್. ಲೋಕೇಶ್, ಕೆ.ಎನ್. ಶಿವಕುಮಾರ್, ಇಸಾಕ್, ಶಿವಕುಮಾರ್ ಅವರುಗಳನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಎಸ್.ಎಂ. ಚಂಗಪ್ಪ, ಕೆ.ಎ. ಯಾಕೂಬ್, ಶೀಲಾ ಡಿಸೋಜ, ಭಾಗ್ಯ ಮಂಜುನಾಥ್, ಕವಿತಾ, ಚಂದ್ರಿಕ ಕುಮಾರ್, ಬಿ.ಎನ್. ಬಸವರಾಜು, ವಿ.ಎ. ಲಾರೆನ್ಸ್, ಸುರೇಂದ್ರ, ಅಬ್ಬಾಸ್, ಕೆ. ಮೋಹನ್ ಸೇರಿದಂತೆ ಇತರರು ಭಾಗವಹಿಸಿದ್ದರು.