ಸುಂಟಿಕೊಪ್ಪ, ಮಾ. 12: ಸುಂಟಿಕೊಪ್ಪ ವ್ಯಾಪ್ತಿಯ ದಲಿತರ ಕುಂದು ಕೊರತೆ ಸಭೆಯನ್ನು ಪಿಎಸ್‍ಐ ಬಿ. ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ನಡೆಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ ಠಾಣಾಧಿಕಾರಿ ಬಿ.ತಿಮ್ಮಪ್ಪ ಮಾತನಾಡಿ ನಿಮ್ಮಲ್ಲಿ ಯಾವುದಾದರು ದೂರುಗಳಿದ್ದಲ್ಲಿ ನೇರವಾಗಿ ತಿಳಿಸಿ ಅದನ್ನು ನಮ್ಮ ಇಲಾಖೆಯಿಂದ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಿ ಸಮಸ್ಯೆಗಳನ್ನು ಬಗೆ ಹರಿಸಲು ಸಹಕಾರ ನೀಡಲಾಗುವುದು ಎಂದರು. ದಲಿತ ಸಂಘದ ಅಧ್ಯಕ್ಷ ಎಂ.ಎಸ್. ರವಿ ಹಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಎಎಸ್‍ಐ ಕಾವೇರಪ್ಪ, ದಲಿತ ಸಂಘದ ಗೌರವ ಅಧ್ಯಕ್ಷ ಕಾವೇರಪ್ಪ, ಉಪಾಧ್ಯಕ್ಷ ನರಸ, ರಾಮಚಂದ್ರ, ಖಜಾಂಚಿ ಜಯಣ್ಣ, ಕಾರ್ಯದರ್ಶಿ ಅರುಣ್‍ಕುಮಾರ್, ಸಂಘದ ಸದಸ್ಯರಾದ ಜನಾರ್ಧನ, ರವಿಸ್ವಾಮಿ, ಕೃಷ್ಣಪ್ಪ. ವಿಜಯ, ಅಶೋಕ, ಶಶಿ ಇದ್ದರು.