ಮಡಿಕೇರಿ, ಮಾ. 12: ಮೈತಾಡಿ ಶ್ರೀ ಬೊಳ್ಳಿಬಿಲ್ಲಯ್ಯಪ್ಪ ದೇವರ ಉತ್ಸವವನ್ನು ತಾ. 14, 15 ಹಾಗೂ 16ರಂದು ಆಚರಿಸಲಾಗುತ್ತದೆ.

ತಾ. 14ರಂದು ಪಟ್ಟಣಿ, ಅಂದಿ ಬೊಳಕು, ತೂಚಂಬಲಿ, ಕ್ಷೇತ್ರಪಾಲ ಪೂಜೆ ನಡೆಯಲಿದೆ. ತಾ. 15ರಂದು ಭಕ್ತಾದಿಗಳಿಂದ ಪೂಜೆ, ಎತ್ತು ಪೋರಾಟ, ಬೊಳಕಾಟ, ದೇವರ ಮೆರವಣಿಗೆ ಹಾಗೂ ತಾ. 16ರಂದು ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ಅಮೃತ ಸ್ನಾನ, ದೇವಸ್ಥಾನದಲ್ಲಿ ನೃತ್ಯ, ಮಹಾಪೂಜೆಗಳು ನಡೆಯಲಿವೆ ಎಂದು ಕಾರ್ಯಕಾರಿ ಮಂಡಳಿ ತಿಳಿಸಿದೆ.