ಶನಿವಾರಸಂತೆ, ಮಾ. 12: ಕೊಡ್ಲಿಪೇಟೆಯ ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ 9.45ರ ವೇಳೆಗೆ ಮುಜೈನ್ (2) ಎಂಬ ಮಗು ತನ್ನ ತಾತ ಖಾದರ್ ಅವರೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಾರು (ಕೆಎ -04- ಎಎ-4660) ಮಗುವಿಗೆ ಡಿಕ್ಕಿಯಾಗಿದ್ದು ಮಗುವನ್ನು ಹಾಸನದ ಎಸ್.ಎಸ್.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ತಾ. 12ರ ಬೆಳಗ್ಗಿನ ಜಾವ ಮಗು ಮೃತಪಟ್ಟಿದೆ. ಕಾರನ್ನು ನಿಲ್ಲಿಸದೇ ಕಾರಿನೊಂದಿಗೆ ಚಾಲಕ ಪರಾರಿಯಾಗಿದ್ದು, ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.