ಗೋಣಿಕೊಪ್ಪ ವರದಿ, ಮಾ. 12 ; ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮುಂದುವರಿಯಬೇಕು ಎಂದು ಕೃಷಿ ತಜ್ಞರು ಕೃಷಿಕರಿಗೆ ಸಲಹೆ ನೀಡಿದರು.

ಅತ್ತೂರು ಗ್ರಾಮದಲ್ಲಿರುವ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಕ್ಷೇತ್ರದಲ್ಲಿ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ, ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಮೀನುಗಾರಿಕೆ, ಇಲಾಖೆ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಿಸಾನ್ ಮೇಳ ಮತ್ತು ಕೃಷಿ ಅಭಿಯಾನದ ಕೊನೆಯ ದಿನದ ತಾಂತ್ರಿಕ ಸಮಾವೇಶದಲ್ಲಿ ವಿಜ್ಞಾನಿಗಳು ನೂತನ ತಂತ್ರಗಾರಿಕೆಗಳ ಮಾಹಿತಿ ನೀಡಿದರು.

ಕಾಳುಮೆಣಸು ಕೃಷಿಯಲ್ಲಿ ಆಧುನಿಕ ಕೃಷಿ ತಾಂತ್ರಿಕತೆ ಬಗ್ಗೆ ಅಪ್ಪಂಗಳ ಭಾರತೀಯ ಸಾಂಬಾರ ಮಂಡಳಿ ಪ್ರಧಾನ ವಿಜ್ಞಾನಿ ಡಾ. ಎಸ್. ಜೆ. ಅಂಕೇಗೌಡ ಮಾಹಿತಿ ನೀಡಿ, ಕಾಫಿ ತೋಟಕ್ಕೆ ಬಳಸುವ ರಾಸಾಯನಿಕ ಗೊಬ್ಬರವನ್ನು ಕಾಳುಮೆಣಸು ಬಳ್ಳಿಗಳಿಗೆ ನೀಡುವುದರಿಂದ ತೂಕದಲ್ಲಿ ಇಳಿಮುಖ ಸಮಸ್ಯೆಯನ್ನು ಸ್ಥಳೀಯ ಬೆಳೆಗಾರರು ಅನುಭವಿಸುವಂತಾಗಿದೆ. ಪೊಟಾಶ್ ಅಂಶ ಹೆಚ್ಚಿಗೆ ಬೇಕಿರುವುದರಿಂದ ಬೆಳೆಗಾರರು ಗುಣಮಟ್ಟ ಕಾಯ್ದುಕೊಳ್ಳಲು ಪ್ರತ್ಯೇಕ ಗೊಬ್ಬರ ನೀಡುವ ಅವಶ್ಯಕತೆ ಇದೆ. ಹೆಚ್ಚು ನೀರು ನೀಡುವುದರಿಂದ ಗುಣಮಟ್ಟ ಕಾಯ್ದುಕೊಳ್ಳಬಹುದಾಗಿದ್ದು, ಬಾಧೆ ತರುವ ಹುಳಗಳ ನಿಯಂತ್ರಣ ಸಾಧ್ಯ ಎಂದು ಅವರು ಸಲಹೆ ನೀಡಿದರು. ಜಿಲ್ಲೆಯಲ್ಲಿ ಪನಿಯೂರು 1 ತಳಿ ಬಳಕೆ ಹೆಚ್ಚಾಗುತ್ತಿರುವುದರಿಂದ ಭವಿಷ್ಯದಲ್ಲಿ ಕಾಳುಮೆಣಸು ಗಿಡಗಳ ರಕ್ಷಣೆ ಕಷ್ಟ ಸಾಧ್ಯ. ಬೇರೆ ತಳಿಗಳತ್ತ ಕೃಷಿಕರು ಪ್ರಯೋಗಕ್ಕೆ ಮುಂದಾಗಬೇಕು ಎಂದರು.

ಪ್ರಗತಿಪರ ಕೃಷಿ ಮಹಿಳೆ ವೀಣಾ ಸುದೀರ್ ಸಮಗ್ರ ಕೃಷಿ ಪದ್ದತಿ ಬಗ್ಗೆ ಮಾಹಿತಿ ನೀಡಿದರು. ದೈನಂದಿನ ಜೀವನಕ್ಕೆ ಬೇಕಾದ ಆಹಾರ ಉತ್ಪಾದನೆಗೆ ಮಹಿಳೆಯರು ಹೆಚ್ಚು ಆಸಕ್ತಿ ತೋರಬೇಕು. ಇದರಿಂದ ಆರ್ಥಿಕ ಸಮಸ್ಯೆಯಿಂದ ಹೊರಬರಬಹುದು ಎಂದರು.

ಪ್ರಗತಿಪರ ಯುವ ಕೃಷಿಕ ಕೆ. ಪಿ. ಸುಬ್ಬಯ್ಯ ಮಾತನಾಡಿ, ಕಾಫಿಯಲ್ಲಿ ಆಧುನಿಕ ಮಾರುಕಟ್ಟೆ ವ್ಯವಸ್ಥೆಯನ್ನು ಅರ್ಥೈಸಿಕೊಂಡು ಹೆಚ್ಚಿನ ಲಾಭಾಂಶಕ್ಕೆ ಬೆಳೆಗಾರರು ಆಸಕ್ತಿ ತೋರಬೇಕಿದೆ. ರೈತ ಉತ್ಪಾದಕರ ಕಂಪೆನಿ ಮೂಲಕ ಕಂಪೆನಿಗಳಿಗೆ ನೇರವಾಗಿ ಕಾಫಿ ಬೀಜ ಮಾರಾಟ ಮಾಡುವ ವ್ಯವಸ್ಥೆಯಿಂದ ಮಧ್ಯವರ್ತಿಗೆ ಹೋಗುವ ಲಾಭಾಂಶ ಬೆಳೆಗಾರನಿಗೆ ದೊರೆಯುವಂತಾಗಿದೆ. ಪ್ರಾಯೋಗಿಕವಾಗಿ ಪುತ್ತರಿ ರೈತ ಉತ್ಪಾದಕರ ಕಂಪೆನಿ ಕಾಫಿ ಖರೀದಿಗೆ ಮುಂದಾಗಿದೆ ಎಂದರು.

ಆಧುನಿಕ ಹೈನುಗಾರಿಕೆ ಬಗ್ಗೆ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ. ಎ. ಎಸ್. ಶಾಂತೇಶ್, ಕೆವಿಕೆ ಪಶು ವಿಜ್ಞಾನ ವಿಜ್ಞಾನಿ ಡಾ. ಸುರೇಶ್ ಸಲಹೆ ನೀಡಿದರು.

ಕೆವಿಕೆ ವಿಜ್ಞಾನಿ ಡಾ. ವೀರೇಂದ್ರಕುಮಾರ್ ಅವರು ಬೆಳೆಗಳಲ್ಲಿನ ಕೀಟ ಮತ್ತು ರೋಗಗಳ ನಿರ್ವಹಣೆ, ಡಾ. ಪ್ರಭಾಕರ್ ಅವರು ಸುಧಾರಿತ ಶುಂಠಿ ಬೆಳೆ, ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದ ಉಪ ನಿರ್ದೇಶಕ ಡಾ. ಪಿ. ಶಿವಪ್ರಸಾದ್ ಕಾಫಿ ಬೆಳೆಯಲ್ಲಿ ನೀರಾವರಿ, ಸುಣ್ಣದ ಮಹತ್ವ, ಕೆವಿಕೆ ತಜ್ಞ ಡಾ. ಕೆ.ಎ. ದೇವಯ್ಯ ಅವರು ಕಾಳು ಮೆಣಸು ಕೃಷಿಯಲ್ಲಿ ಒಂಟಿಕಣ್ಣಿನ ತಂತ್ರಗಾರಿಕೆ, ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರು ಭತ್ತ ಕೃಷಿಯಲ್ಲಿ ಯಂತ್ರೋಪಕರಣ ಬಳಕೆ ಬಗ್ಗೆ ಮಾಹಿತಿ ನೀಡಿದರು.

ಚೇರಲ ಶ್ರೀಮಂಗಲ ಗ್ರಾಮದ ಹಸಿರು ನರ್ಸರಿ ವತಿಯಿಂದ ಬಟರ್‍ಫ್ರೂಟ್, ರಾಂಬಾಟನ್, ಮ್ಯಾಂಗೋಸ್ಟಿನ್ ಸಸಿಗಳ ಪ್ರದರ್ಶನ ಮತ್ತು ಮಾರಾಟ, ಸ್ಪ್ರೇ ಯಂತ್ರ, ನೀರು ಹಾಯಿಸುವ ಪೈಪುಗಳು, ಟ್ರ್ಯಾಕ್ಟರ್ ಮತ್ತು ಟಿಲ್ಲರ್‍ಗಳ ಪ್ರದರ್ಶನ ಮತ್ತು ಸರ್ಕಾರದಿಂದ ನೀಡಲಾಗುವ ಸಹಾಯಧನದ ಮಾಹಿತಿಗಳ ಪ್ರದರ್ಶನ ಉಪಯುಕ್ತವಾಗಿತ್ತು.

ಕೃಷಿ ಇಲಾಖೆ ವತಿಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳ ಬಗ್ಗೆ ಮಾಹಿತಿ, ಕಿಸಾನ್ ಸಮ್ಮಾನ್ ಮತ್ತು ಎರೆಹುಳು ಗೊಬ್ಬರ ಮಾಹಿತಿ ನೀಡಲಾಯಿತು.

ಕೃಷಿ ವಿಜ್ಞಾನ ಕೇಂದ್ರ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ವತಿಯಿಂದ ಅಣಬೆ ಬೆಳೆಯ ಬಗ್ಗೆ ಮತ್ತು ಮನೆಯಲ್ಲಿಯೇ ಅಣಬೆ ಬೆಳೆಯುವ ಕ್ರಮಗಳ ಬಗ್ಗೆ ಮಾಹಿತಿ ಮತ್ತು ಅಣಬೆ ಬೀಜಗಳ ಮಾರಾಟ, ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಯೋಗ ಕೇಂದ್ರದಿಂದ ಚಕೋತ, ಗಜನಿಂಬೆ, ಬೆನೆಕೆ ಹಣ್ಣು, ಸಪೆÇೀಟ ಹಣ್ಣುಗಳ ಪ್ರದರ್ಶನ ಹಾಗೂ ಲಕ್ಷ್ಮಣ ಫಲ ಸಸಿಯ ಮಾರಾಟ, ಪುತ್ತರಿ ರೈತ ಉತ್ಪಾದಕ ಸಂಸ್ಥೆ ವತಿಯಿಂದ ನಾಟಿಕೋಳಿ ಮೊಟ್ಟೆ ಮಾರಾಟ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಮಡಿಕೇರಿ ವಿಸ್ತರಣಾ ಘಟಕದ ಹೊಸ ತಳಿಯ ಬೀನ್ಸ್, ಕ್ಯಾಬೇಜ್ ಬೆಳೆಯುವ ವಿಧಾನ ಮತ್ತು ನೂತನ ತಳಿಯ ವಿಚಾರಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.

ದೇಶಿಯ ಹಂದಿ, ಹಸು ತಳಿಗಳು ಮತ್ತು ಕೋಳಿ, ಕುರಿ ಸಾಕಾಣಿಕೆ ಬಗ್ಗೆ ಪಶುಪಾಲನಾ ಇಲಾಖೆಯ ಮಳಿಗೆ, ಮತ್ತು ಮಾರಾಟ, ಸ್ಪ್ರೇ ಯಂತ್ರ, ನೀರು ಹಾಯಿಸುವ ಪೈಪುಗಳು, ಟ್ರ್ಯಾಕ್ಟರ್ ಮತ್ತು ಟಿಲ್ಲರ್‍ಗಳ ಪ್ರದರ್ಶನ ಮತ್ತು ಸರ್ಕಾರದಿಂದ ನೀಡಲಾಗುವ ಸಹಾಯಧನದ ಮಾಹಿತಿಗಳ ಪ್ರದರ್ಶನ ಉಪಯುಕ್ತವಾಗಿತ್ತು.

ಕೃಷಿ ಇಲಾಖೆ ವತಿಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳ ಬಗ್ಗೆ ಮಾಹಿತಿ, ಕಿಸಾನ್ ಸಮ್ಮಾನ್ ಮತ್ತು ಎರೆಹುಳು ಗೊಬ್ಬರ ಮಾಹಿತಿ ನೀಡಲಾಯಿತು.

ಕೃಷಿ ವಿಜ್ಞಾನ ಕೇಂದ್ರ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ವತಿಯಿಂದ ಅಣಬೆ ಬೆಳೆಯ ಬಗ್ಗೆ ಮತ್ತು ಮನೆಯಲ್ಲಿಯೇ ಅಣಬೆ ಬೆಳೆಯುವ ಕ್ರಮಗಳ ಬಗ್ಗೆ ಮಾಹಿತಿ ಮತ್ತು ಅಣಬೆ ಬೀಜಗಳ ಮಾರಾಟ, ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಯೋಗ ಕೇಂದ್ರದಿಂದ ಚಕೋತ, ಗಜನಿಂಬೆ, ಬೆನೆಕೆ ಹಣ್ಣು, ಸಪೆÇೀಟ ಹಣ್ಣುಗಳ ಪ್ರದರ್ಶನ ಹಾಗೂ ಲಕ್ಷ್ಮಣ ಫಲ ಸಸಿಯ ಮಾರಾಟ, ಪುತ್ತರಿ ರೈತ ಉತ್ಪಾದಕ ಸಂಸ್ಥೆ ವತಿಯಿಂದ ನಾಟಿಕೋಳಿ ಮೊಟ್ಟೆ ಮಾರಾಟ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಮಡಿಕೇರಿ ವಿಸ್ತರಣಾ ಘಟಕದ ಹೊಸ ತಳಿಯ ಬೀನ್ಸ್, ಕ್ಯಾಬೇಜ್ ಬೆಳೆಯುವ ವಿಧಾನ ಮತ್ತು ನೂತನ ತಳಿಯ ವಿಚಾರಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.

ದೇಶಿಯ ಹಂದಿ, ಹಸು ತಳಿಗಳು ಮತ್ತು ಕೋಳಿ, ಕುರಿ ಸಾಕಾಣಿಕೆ ಬಗ್ಗೆ ಪಶುಪಾಲನಾ ಇಲಾಖೆಯ ಮಳಿಗೆ, ಒದಗಿ ಬರದ ಕಾರಣ ಹಾಗೂ ಪಿಪಿಪಿ ಮಾದರಿ ಗುತ್ತಿಗೆಗೆ ಅರ್ಹವಾಗದ ಕಾರಣ ಸದರಿ ರಸ್ತೆ ಅಭಿವೃದ್ಧಿಯನ್ನು ಎಡಿಬಿ ನೆರವಿನ ಕೆಶಿಪ್-3ರಲ್ಲಿ ಕೈಗೊಳ್ಳುವುದು ಸಾಧ್ಯವಾಗಿರುವುದಿಲ್ಲ. 2018-19ನೇ ಸಾಲಿನ ಪ್ರಕೃತಿ ವಿಕೋಪದಿಂದ ವೀರಾಜಪೇಟೆ- ಬೈಂದೂರು ರಾಜ್ಯ ಹೆದ್ದಾರಿಯ ಕೆಲವು ಭಾಗಗಳು ಕೊಚ್ಚಿಹೋಗಿದ್ದು, ಆ ಆಯ್ದ ಭಾಗಗಳನ್ನು ಪುನರ್ ನಿರ್ಮಾಣ ಮಾಡಲಾಗಿದೆ ಎಂದು ಗೋವಿಂದ ಕಾರಜೋಳ ವಿವರಿಸಿದರು.

ಜಲಪ್ರಳಯದಿಂದ ಕೊಡಗಿನಲ್ಲಾದ ಬೆಳೆಹಾನಿ, ನೀಡಲಾದ ಪರಿಹಾರಗಳ ಕುರಿತು ಶಾಸಕ ರಂಜನ್ ಪ್ರಶ್ನೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ವಿವರ ನೀಡಿದರು. 2019-20ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಆದ ಜಲ ಪ್ರಳಯದಿಂದ 2,450 ಹೆಕ್ಟೇರ್ ಕೃಷಿ ಬೆಳೆ, 10,331 ಹೆಕ್ಟೇರ್ ತೋಟಗಾರಿಕಾ ಬೆಳೆ, 73,774 ಹೆಕ್ಟೇರ್ ಕಾಫಿ ಬೆಳೆ ಹಾನಿಯಾಗಿದೆ.

ಪ್ರವಾಹದಿಂದ ಬೆಳೆಹಾನಿಯಾದ ರೈತರ ಬ್ಯಾಂಕ್ ಖಾತೆಗೆ ಪರಿಹಾರ ತಂತ್ರಾಂಶದ ಮೂಲಕ ನೇರವಾಗಿ ಇನ್‍ಪುಟ್ ಸಬ್ಸಿಡಿ ಮೊತ್ತವನ್ನು ಜಮಾ ಮಾಡಲಾಗಿದೆ. ಮಾರ್ಗಸೂಚಿಯಂತೆ ಬೆಳೆಹಾನಿಯಾದ ಎಲ್ಲಾ ರೈತರಿಗೆ ಪರಿಹಾರ ನೀಡಲಾಗಿದೆ.

ಪ್ರಸ್ತುತ ರೂ.10093.38 ಲಕ್ಷ ಇನ್‍ಪುಟ್ ಸಬ್ಸಿಡಿ ಮೊತ್ತವನ್ನು ಪರಿಹಾರ ತಂತ್ರಾಂಶದ ಮೂಲಕ ಬೆಳೆಹಾನಿಯಾದ 38,990 ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ರೈತರಿಗೆ ನೀಡುತ್ತಿರುವ ಕೃಷಿ ಉಪಕರಣಗಳನ್ನು ಇಲಾಖೆಯು ಯಾವುದೇ ಸಂಸ್ಥೆಯಿಂದ ಖರೀದಿ ಮಾಡುತ್ತಿಲ್ಲ. ಆದರೆ, ರೈತರು ಇಚ್ಚಿಸುವ ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಉತ್ತೇಜಿಸುವ ಸಲುವಾಗಿ ಸಹಾಯಧನವನ್ನು ನೀಡಲಾಗುತ್ತಿದೆ.

ಆಸಕ್ತಿಯುಳ್ಳ ರೈತರು ಕೆ-ಕಿಸಾನ್ ತಂತ್ರಾಂಶದ ಮೂಲಕ ಎಂಪ್ರಾನಲ್‍ಗೊಂಡಿರುವ ಸಂಸ್ಥೆಗಳಿಂದ ಸಹಾಯಧನ ಯೋಜನೆಯಡಿ ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ವಿವರಿಸಿದರು.