ಕುಶಾಲನಗರ, ಮಾ 11: ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ಸಂಚಾರಿ ಪೆÇಲೀಸ್ ಠಾಣೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಬಡಾವಣೆ ನಿವಾಸಿಗಳು ಕುಶಾಲನಗರ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ನಡೆಯಿತು.

ಗುಂಡೂರಾವ್ ಬಡಾವಣೆ ವ್ಯಾಪ್ತಿಯ ಸಾರ್ವಜನಿಕ ಬಳಕೆಗೆ ಮೀಸಲಿರಿಸಿದ್ದ 27 ಸೆಂಟ್ ಪ್ರದೇಶದಲ್ಲಿ ಸಂಚಾರಿ ಪೆÇಲೀಸ್ ಠಾಣೆ ನಿರ್ಮಾಣಕ್ಕೆ ಜಿಲ್ಲಾಡಳಿತ ಅನುಮತಿ ಕಲ್ಪಿಸಿರುವುದನ್ನು ಬಡಾವಣೆ ನಿವಾಸಿಗಳು ಖಂಡಿಸಿದ್ದಾರೆ. ಸಂಚಾರಿ ಪೆÇಲೀಸ್ ಠಾಣೆ ನಿರ್ಮಾಣದಿಂದ ಬಡಾವಣೆ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳ ಜನತೆಯ ಶಾಂತಿಭಂಗ ಉಂಟಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪೆÇಲೀಸ್ ಠಾಣೆ ನಿರ್ಮಾಣಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರೂ ಕೂಡ ಜನರ ಭಾವನೆಗಳಿಗೆ ಬೆಲೆ ಕೊಡದೆ ಜಿಲ್ಲಾಧಿಕಾರಿಗಳು ಅನುಮತಿ ಕಲ್ಪಿಸಿರುವುದನ್ನು ವಿರೋಧಿಸಿ ಘೋಷಣೆಗಳನ್ನು ಕೂಗಲಾಯಿತು. ಕೂಡಲೇ ಜಿಲ್ಲಾಧಿಕಾರಿಗಳು ನೀಡಿರುವ ಮಂಜೂರಾತಿ ಆದೇಶವನ್ನು ರದ್ದುಗೊಳಿಸಬೇಕೆಂದು ಬಡಾವಣೆ ನಿವಾಸಿಗಳು ಒತ್ತಾಯಿಸಿದರು. ಈ ಸಂಬಂಧ ತಾಲೂಕು ತಹಶೀಲ್ದಾರ್ ಗೋವಿಂದರಾಜು ಮತ್ತು ಕುಶಾಲನಗರ ಪಪಂ ಮುಖ್ಯಾಧಿಕಾರಿ ಸುಜಯ್ ಕುಮಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಬಡಾವಣೆ ನಿವಾಸಿಗಳ ಪರವಾಗಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ವಿ.ಪಿ.ಶಶಿಧರ್, ಜನನಿಬಿಡ ಪ್ರದೇಶದಲ್ಲಿ ಸಂಚಾರಿ ಪೆÇಲೀಸ್ ಠಾಣೆ ನಿರ್ಮಾಣಗೊಂಡಲ್ಲಿ ಈ ಭಾಗದ ನಿವಾಸಿಗಳ ಸ್ವಸ್ಥತೆ ಹಾಳಾಗುತ್ತದೆ. ಗುಂಡೂರಾವ್ ಬಡಾವಣೆ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳ 1300 ಕ್ಕೂ ಅಧಿಕ ನಿವೇಶನಗಳ 5 ಸಾವಿರ ಮಂದಿಗೆ ಅನಾನುಕೂಲ ಸೃಷ್ಟಿಯಾಗಲಿದೆ. ಈ ಭಾಗದ ಜನರ ಸಾಂಸ್ಕøತಿಕ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ಈ ಸ್ಥಳವನ್ನು ಮೀಸಲಿಡಬೇಕಿದೆ. ಪಂಚಾಯ್ತಿ ವ್ಯಾಪ್ತಿಯ ಇತರೆಡೆ ಪರ್ಯಾಯ ಪ್ರದೇಶವನ್ನು ಗುರುತಿಸಿ ಅಲ್ಲಿ ಠಾಣೆ ನಿರ್ಮಿಸುವುದು ಸೂಕ್ತ. ಠಾಣೆ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರೂ ಅದನ್ನು ಧಿಕ್ಕರಿಸಿ ಜಿಲ್ಲಾಡಳಿತ ಅನುಮತಿ ಕಲ್ಪಿಸಿರುವುದು ಖಂಡನೀಯ ಎಂದ ಶಶಿಧರ್, ಸಂಚಾರಿ ಠಾಣೆ ಕಾರ್ಯನಿರ್ವಹಿಸುತ್ತಿರುವ ಹಾಲಿ ಕಟ್ಟಡ ಪ್ರದೇಶವನ್ನು ಶಾಶ್ವತ ಸಂಚಾರಿ ಠಾಣೆಯಾಗಿ ಸರಕಾರದ ಮಟ್ಟದಲ್ಲಿ ಪರಿವರ್ತಿಸಿಕೊಳ್ಳುವಂತೆ ಸಲಹೆ ನೀಡಿದರು.

ಇದೇ ಸಂದರ್ಭ ಸಾಯಿ ಬಡಾವಣೆಯಲ್ಲಿ ಸಿಎ ಸೈಟ್‍ನಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಜಿಪಂ ಸದಸ್ಯೆ ಕೆ.ಪಿ.ಚಂದ್ರಕಲಾ, ಶಶಿಧರ್, ಪಪಂ ಮಾಜಿ ಸದಸ್ಯ ನಂಜುಂಡಸ್ವಾಮಿ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು. ಮುಳುಗಡೆ ಪ್ರದೇಶವಾಗಿರುವ ಸಾಯಿ ಬಡಾವಣೆಯಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ಕಲ್ಪಿಸಬಾರದು. ಸಾಯಿ ಬಡಾವಣೆಯ ಸಿಎ ಸೈಟ್ ಮತ್ತು ಪಾರ್ಕ್‍ಗೆ ಜಾಗ ಮೀಸಲಿರಿಸದೆ ಬಡಾವಣೆ ಮಾಲೀಕರು ನಿಯಮಬಾಹಿರವಾಗಿ ದೇವಾಲಯ ನಿರ್ಮಿಸಿದ್ದಾರೆ. ಇದಕ್ಕೆ ಬದಲಿಯಾಗಿ ಕಾಯ್ದಿರಿಸಿದ್ದ ಸ್ಥಳದಲ್ಲಿ ಇದೀಗ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಕೆ.ಪಿ.ಚಂದ್ರಕಲಾ ಆರೋಪಿಸಿದರು.

ಪ್ರಸಕ್ತ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಮುಂದಾಗಿರುವ ಸ್ಥಳ ಸೂಕ್ತ ಪ್ರದೇಶವಲ್ಲ. ಬಡಾವಣೆ ಮಾಲೀಕ ಕಬಳಿಸಿರುವ ಸಿಎ ಸೈಟ್ ಪಂಚಾಯ್ತಿ ಸುಪರ್ದಿಗೆ ಪಡೆದು ಕೊಳ್ಳಲು ಮುಂದಾಗುವುದು ಅವಶ್ಯ ಎಂದು ವಿ.ಪಿ.ಶಶಿಧರ್ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗುಂಡೂರಾವ್ ಬಡಾವಣೆ ನಿವಾಸಿಗಳಾದ ಜಿ.ಎಲ್.ನಾಗರಾಜ್, ಕೆ.ಎನ್.ಅಶೋಕ್, ಮಂಜುನಾಥ್ ಗುಂಡೂರಾವ್, ಲಕ್ಷ್ಮಣ, ಪಪಂ ಸದಸ್ಯರಾದ ಪ್ರಮೋದ್ ಮುತ್ತಪ್ಪ, ವಿ.ಎಸ್.ಆನಂದಕುಮಾರ್, ಶೇಖ್ ಖಲೀಮುಲ್ಲಾ, ಜಯಲಕ್ಷ್ಮಿ ನಂಜುಂಡಸ್ವಾಮಿ, ಪ್ರಮೋದ್ ಮುತ್ತಪ್ಪ, ಸುಂದರೇಶ್, ಜಗದೀಶ್, ಸುರೇಶ್, ಸುರಯ್ಯಭಾನು, ಮಾಜಿ ಸದಸ್ಯರಾದ ಜೋಸೆಫ್ ವಿಕ್ಟರ್ ಸೋನ್ಸ್, ಅಬ್ದುಲ್ ಖಾದರ್, ಕೃಷ್ಣ ಮತ್ತಿತರರು ಇದ್ದರು.