ಮಡಿಕೇರಿ, ಮಾ. 10: ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಕೊಡಗು ಜಿಲ್ಲೆಯ ವಿವಿಧ ಸಮಸ್ಯೆಗಳ ಚರ್ಚೆಯೊಂದಿಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಕೆಲವು ವರದಿಗಳ ವಿಚಾರ ಪ್ರಸ್ತಾಪಗೊಂಡಿತು. ವಿಧಾನ ಪರಿಷತ್‍ನ ಕಲಾಪದ ಸಂದರ್ಭದಲ್ಲಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾಗಿರುವ ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ವೀಣಾ ಅಚ್ಚಯ್ಯ ಅವರುಗಳು ‘ಶಕ್ತಿ’ಯಲ್ಲಿ ಪ್ರಕಟ ಗೊಂಡಿದ್ದ ವರದಿಗಳನ್ನು ಉಲ್ಲೇಖಿಸಿ ಸದನದ ಗಮನ ಸೆಳೆದಿದ್ದು ವಿಶೇಷವಾಗಿತ್ತು.ಜಿಲ್ಲೆಯಲ್ಲಿ ವರದಿಯಾದ ನಕಲಿ ಚಾಕಲೇಟ್ ದಂಧೆಯ ವಿಚಾರ ಹಾಗೂ ಕೇರಳ ರಾಜ್ಯದ ಮೂಲಕ ಜಿಲ್ಲೆಗೆ ಹಾಗೂ ರಾಜ್ಯದ ಇತರೆಡೆಗೆ ಮಡಿಕೇರಿ, ಮಾ. 10: ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಕೊಡಗು ಜಿಲ್ಲೆಯ ವಿವಿಧ ಸಮಸ್ಯೆಗಳ ಚರ್ಚೆಯೊಂದಿಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಕೆಲವು ವರದಿಗಳ ವಿಚಾರ ಪ್ರಸ್ತಾಪಗೊಂಡಿತು. ವಿಧಾನ ಪರಿಷತ್‍ನ ಕಲಾಪದ ಸಂದರ್ಭದಲ್ಲಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾಗಿರುವ ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ವೀಣಾ ಅಚ್ಚಯ್ಯ ಅವರುಗಳು ‘ಶಕ್ತಿ’ಯಲ್ಲಿ ಪ್ರಕಟ ಗೊಂಡಿದ್ದ ವರದಿಗಳನ್ನು ಉಲ್ಲೇಖಿಸಿ ಸದನದ ಗಮನ ಸೆಳೆದಿದ್ದು ವಿಶೇಷವಾಗಿತ್ತು.ಜಿಲ್ಲೆಯಲ್ಲಿ ವರದಿಯಾದ ನಕಲಿ ಚಾಕಲೇಟ್ ದಂಧೆಯ ವಿಚಾರ ಹಾಗೂ ಕೇರಳ ರಾಜ್ಯದ ಮೂಲಕ ಜಿಲ್ಲೆಗೆ ಹಾಗೂ ರಾಜ್ಯದ ಇತರೆಡೆಗೆ ನಕಲಿ ಹೋಂ ಮೇಡ್ ಚಾಕ್‍ಲೇಟ್ ಮಾರಾಟದ ವಿಚಾರದ ಬಗ್ಗೆ ಸರಕಾರ ಕೈಗೊಂಡಿರುವ ಕ್ರಮದ ಬಗ್ಗೆ ಸುನಿಲ್ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಬಿ. ಶ್ರೀ ರಾಮುಲು ಅವರು ಸಂಗ್ರಹಿತ ಚಾಕ್‍ಲೇಟ್‍ಗಳನ್ನು ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಇದರಲ್ಲಿ 15 ಚಾಕ್‍ಲೇಟ್ ಸುರಕ್ಷಿತ ಎಂದು ವರದಿ ಬಂದಿದೆ. 2 ಚಾಕ್‍ಲೇಟ್ ಮಾದರಿಗಳು ‘ಮಿಸ್‍ಬ್ರಾಂಡೆಡ್’ ಎಂದು ತಿಳಿದು ಬಂದಿದ್ದು ಇದಕ್ಕೆ ಎಚ್ಚರಿಕೆಯೊಂದಿಗೆ ದಂಡ ವಿಧಿಸಲಾಗಿದೆ ಎಂದು ಅವರು ತಿಳಿಸಿದರು.ಈ ಕುರಿತಾಗಿ ಆಹಾರ ಸುರಕ್ಷತಾಧಿಕಾರಿಗಳು ಪರಿಶೀಲನೆ ನಡೆಸಿ ತಯಾರಿಕೆಗೆ ಹಾಗೂ ಮಾರಾಟಗಾರರಿಗೆ ಸೂಚನೆ ನೀಡಿದ್ದಾರೆ. ನಕಲಿ ಎಂಬುದು ಧೃಢ ಪಟ್ಟರೆ ಕಾನೂನು ಕ್ರಮ ಕೈಗೊಳ್ಳಬಹು ದಾಗಿದೆ ಎಂದು ಅವರು ತಿಳಿಸಿದರು.
ಕಸದ ವಿಲೇವಾರಿ ಪ್ರಸ್ತಾಪ:
ಜಿಲ್ಲೆಯ ಅರಣ್ಯ ಹಾಗೂ ನಿರ್ಜನ ಪ್ರದೇಶಗಳಲ್ಲಿ ಕೇರಳ ರಾಜ್ಯ ಹಾಗೂ ಅಲ್ಲಿರುವ ಬಂದರಿನ ಮೂಲಕ ಕಸವನ್ನು ವಿದೇಶ ಗಳಿಂದಲೂ ತಂದು, ಹಾನಿ ಮಾಡುತ್ತಿರುವ ವಿಚಾರದ ಬಗ್ಗೆ ‘ಶಕ್ತಿ’ ವರದಿಯನ್ನು ಉಲ್ಲೇಖಿಸಿ ಸುನಿಲ್ ಪ್ರಶ್ನಿಸಿದ್ದು ಸೂಕ್ತ ಕಾನೂನು ಕ್ರಮಕ್ಕೆ ಶೂನ್ಯ ವೇಳೆಯಲ್ಲಿ ಆಗ್ರಹಿಸಿದರು. ಈ ಬಗ್ಗೆ ಪೌರಾಡಳಿತ ಸಚಿವರಾದ ನಾರಾಯಣ ಸ್ವಾಮಿ ಅವರು ಸೂಕ್ತ ಕ್ರಮ ಕೈಗೊಳ್ಳುವದಾಗಿ ಸದನದಲ್ಲಿ ಉತ್ತರ ನೀಡಿದರು.
ವನ್ಯಪ್ರಾಣಿಗಳ ಉಪಟಳದ ಚರ್ಚೆ:
ವನ್ಯ ಪ್ರಾಣಿಗಳ ಹಾವಳಿ ಹಾಗೂ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸದಸ್ಯೆ ವೀಣಾ ಅಚ್ಚಯ್ಯ ಸದನದಲ್ಲಿ ಗಮನ ಸೆಳೆದರು. ಈ ಬಗ್ಗೆ ಉತ್ತರಿಸಿದ ಅರಣ್ಯ ಸಚಿವರಾದ ಆನಂದ್‍ಸಿಂಗ್ ಅವರು ಈ ತನಕ ಆಗಿರುವ ಸಮಸ್ಯೆ ಮಾನವ- ಜಾನುವಾರು ಪ್ರಾಣ ಹಾನಿ ಕುರಿತಾದ ಅಂಕಿ ಅಂಶ (ಮೊದಲ ಪುಟದಿಂದ) ಹಾಗೂ ನೀಡಿರುವ ಪರಿಹಾರದ ಕುರಿತು ಮಾಹಿತಿ ನೀಡಿದರು. ಪ್ರಸ್ತುತ ನೀಡಲಾಗುತ್ತಿರುವ ದಯಾತ್ಮಕ ಪರಿಹಾರವನ್ನು ಹೆಚ್ಚಿಸುವ ಪ್ರಸ್ತಾವನೆಯು ಸರಕಾರದ ಮುಂದಿದೆ ಎಂದು ಸಚಿವರು ತಿಳಿಸಿದರು.
ಸಚಿವರ ಭೇಟಿಗೆ ಆಗ್ರಹ
ಚರ್ಚೆಯ ಸಂದರ್ಭ ಮಾತನಾಡಿದ ವೀಣಾ ಅಚ್ಚಯ್ಯ ಅವರು ಕೇವಲ ಇಲಾಖಾ ಮಾಹಿತಿಯನ್ನು ನಂಬದಂತೆ ಹೇಳಿದರಲ್ಲದೆ ಜಿಲ್ಲೆಗೆ ಖುದ್ದಾಗಿ ಆಗಮಿಸಿ ಸಂಘ- ಸಂಸ್ಥೆಗಳು, ಬೆಳೆಗಾರರೊಂದಿಗೆ ಸಮಸ್ಯೆ ಆಲಿಸುವಂತೆÉ ಕೋರಿದರು. ಜನತೆ - ಕಾರ್ಮಿಕರು ಭೀತಿಯ ವಾತಾವರಣ ಎದುರಿಸುತ್ತಾರೆ. ಕಾಡು ಹಂದಿಯನ್ನು ಕೊಂದರೆ ಮೊಕದ್ದಮೆ ಹೂಡಿ ಹಿಂಸೆ ನೀಡಲಾಗುತ್ತಿದೆ. ಇದರ ಚಿತ್ರವನ್ನು ಪತ್ರಿಕೆಗಳಲ್ಲಿ ಭಾರೀ ಅಪರಾಧ ಮಾಡಿದಂತೆ ಪ್ರಕಟಿಸಲಾಗುತ್ತಿದೆ ಎಂದೂ ವೀಣಾ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಪರಿಷತ್‍ನ ಇತರ ಕೆಲವು ಸದಸ್ಯರೂ ವೀಣಾ ಮಾತಿಗೆ ದನಿಗೂಡಿಸಿದರು.ಈ ವಿಚಾರದ ಬಗ್ಗೆ ಸೂಕ್ತ ಕ್ರಮ ವಹಿಸುವದಾಗಿ ಸಚಿವ ಆನಂದ್‍ಸಿಂಗ್ ಈ ಸಂದರ್ಭ ಉತ್ತರಿಸಿದರು.