ಮಡಿಕೇರಿ, ಮಾ. 10: ಮಡಿಕೇರಿ ನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಕುಂಡಾ ಮೇಸ್ತ್ರಿ ಯೋಜನೆಯನ್ನು ಮುಂದಿನ ಡಿಸೆಂಬರ್ ಅಂತ್ಯದೊಳಗಡೆ ಪೂರ್ಣಗೊಳಿಸಲಾಗುವುದೆಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ತಿಳಿಸಿದ್ದಾರೆ.

ವಿಧಾನಪರಿಷತ್‍ನಲ್ಲಿ ಶಾಸಕ ಸುನಿಲ್ ಸುಬ್ರಮಣಿ ಅವರು ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ಮಡಿಕೇರಿ ನಗರಕ್ಕೆ ಕುಂಡಾ ಮೇಸ್ತ್ರಿ ಯೋಜನೆ ಯಾವಾಗ ಪ್ರಾರಂಭವಾ ಯಿತು, ನಗರದಿಂದ ಬಿಡುಗಡೆಯಾದ ಮೊತ್ತವೆಷ್ಟು? ಕಿರು ಅಣೆಕಟ್ಟೆ ಕಾಮಗಾರಿ ಮುಕ್ತಾಯ ವಾಗದಿರಲು ಕಾರಣವೇನು? ಯಾವಾಗ ಪೂರ್ಣ ಗೊಳಿಸಿ ನಗರಸಭೆಗೆ ಒಪ್ಪಿಸಲಾಗುವುದೆಂದು ಪ್ರಶ್ನೆ ಮಂಡಿಸಿದ್ದರು. ಇದಕುತ್ತರಿಸಿದ ಸಚಿವರು, ಯೋಜನೆಯನ್ನು 2010 ರಿಂದ ಪ್ರಾರಂಭಿಸಿ ಕಿರು ಅಣೆಕಟ್ಟೆ ಹೊರತುಪಡಿಸಿ 2016 ರಿಂದ ಚಾಲನೆಗೊಳಿ ಸಲಾಗಿದೆ. ಇಲ್ಲಿಯವರೆಗೆ ರೂ.23.55 ಕೋಟಿ ಅನುದಾನ ನೀಡಲಾಗಿದೆ. ಯೋಜನೆ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ನಗರಸಭೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿಯೆಂದು ತಿಳಿಸಿದ್ದಾರೆ.