ಗೋಣಿಕೊಪ್ಪಲು, ಮಾ. 10: ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕದಿಂದ ಪ್ರತಿ ವರ್ಷದಂತೆ ಪ್ರಸ್ತುತ ವರ್ಷವೂ ಇರ್ಪು ಬ್ರಹ್ಮಗಿರಿ ಬೆಟ್ಟದಲ್ಲಿ ಔಷಧಿ ಸಸ್ಯಗಳ ಅಧ್ಯಯನ ಮತ್ತು ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎನ್.ಸಿ.ಸಿ. ಅಧಿಕಾರಿ ಲೆಫ್ಟಿನೆಂಟ್ ಅಕ್ರಮ್ ಮಾತನಾಡಿದರು. ಅರಣ್ಯಗಳು ಭೂಮಿಯ ಸಮೃದ್ಧಿಯ ಸಂಕೇತ ಅರಣ್ಯನಾಶವೇ ಮನುಷ್ಯನ ಅವನತಿಯ ಸಂಕೇತ ಎಂದರು.