ಮಡಿಕೇರಿ, ಮಾ. 10: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಹಿಳಾ ಸಾಂಸ್ಕøತಿಕ ಉತ್ಸವ ಮಹಿಳಾ ಜನಪದೋತ್ಸವ ಸಾಂಸ್ಕøತಿಕ ಕಾರ್ಯಕ್ರಮ ಮೆರವಣಿಗೆ ಹಾಗೂ ಉದ್ಘಾಟನಾ ಸಮಾರಂಭವು ತಾ. 11 ರಂದು (ಇಂದು) ನಡೆಯಲಿದೆ.
ಅತ್ತೂರು ನಲ್ಲೂರು (ಕಂಬಿಬಾಣೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಂಜೆ 5 ಗಂಟೆಗೆ ಮೆರವಣಿಗೆಯ ಉದ್ಘಾಟನೆ ನಡೆಯ ಲಿದೆ. ಮೆರವಣಿಗೆಯು ಉಪ್ಪುತೋಡು ವಿನಿಂದ ಹೊರಟು ಪ್ರಮುಖ ಬೀದಿಯಲ್ಲಿ ಸಾಗಿ ಕಂಬಿಬಾಣೆ ಗ್ರಾಮದ ಮೂಲಕ ಕಂಬಿಬಾಣೆ ಶಾಲಾ ಮೈದಾನದಲ್ಲಿ ಸಮಾಪ್ತಿಯಾಗಲಿದೆ.
ಕಂಬಿಬಾಣೆ ಮಾಜಿ ಸೈನಿಕ ಲವಕುಮಾರ್ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಬೆಳೆಗಾರ ಸಾಯಿಕುಮಾರ್, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಕಾರ್ಯದರ್ಶಿ ಮಂಜುನಾಥ್, ಸುಭಾಷ್ ಯುವಕ ಸಂಘದ ಅಧ್ಯಕ್ಷ ಮಧುಸೂಧನ್, ಬೆಳೆಗಾರ ಕರ್ನಲ್ ಪ್ರದೀಪ್ ಉತ್ತಯ್ಯ, ಕಮಲ ನೆಹರು ಮಹಿಳಾ ಮಂಡಳಿಯ ಅಧ್ಯಕ್ಷರಾದ ಉಷಾ ಮುರುಳಿ, ಜೆ.ಆರ್. ವೀಣಾ, ಧರ್ಮಸ್ಥಳ ಸಂಘದ ರವಿ ಇತರರು ಪಾಲ್ಗೊಳ್ಳಲಿದ್ದಾರೆ.
ನಂತರ ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಕಂಬಿಬಾಣೆ ಗ್ರಾ.ಪಂ. ಅಧ್ಯಕ್ಷ ಕೃಷ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುಮತಿ, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಸೋಮವಾರಪೇಟೆ ತಾ.ಪಂ. ಸದಸ್ಯ ವಿಜು ಚಂಗಪ್ಪ, ಕಂಬಿಬಾಣೆ ಗ್ರಾ.ಪಂ. ಉಪಾಧ್ಯಕ್ಷೆ ಶೋಭನಾ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.