ಚಿಕ್ಕಮಗಳೂರು, ಮಾ. 10: ಭಾರತದ ಕಾಫಿ ಕೃಷಿಕರು ಸಂಕಷ್ಟದ ದಿನಗಳನ್ನು ಎದುರಿಸುತ್ತಿ ದ್ದಾರೆ. ಕಾಫಿ ದರ ಕುಸಿತ, ಜಾಗತಿಕ ತಾಪಮಾನ, ಅತಿವೃಷ್ಟಿ, ಅನಾವೃಷ್ಟಿ, ಬೆರ್ರಿಬೋರರ್ ಸಮಸ್ಯೆ ಎಲ್ಲವೂ ಇಂದು ನಮ್ಮ ಕೃಷಿಕರಿಗೆ ಪ್ರತಿಕೂಲವಾಗಿದೆ. ಬ್ಯಾಂಕ್‍ನಲ್ಲಿ ಹೊಂದಿಕೊಂಡ ಸಾಲ ಮರುಪಾವತಿಗೂ ಹಲವು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಭಾರತದ ಸಿಂಹಪಾಲು ಕಾಫಿ ಉತ್ಪಾದನೆಯನ್ನು ಕರ್ನಾಟಕ ರಾಜ್ಯ ಉತ್ಪಾದಿಸುತ್ತಿದ್ದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆ. 7,8,9 ರಂದು ಜರುಗಲಿರುವ ‘ವಿಶ್ವ ಕಾಫಿ ಸಮಾವೇಶ ಹಾಗೂ ಎಕ್ಸ್ಪೋ’ ದಲ್ಲಿ ಸ್ವಯಂಪ್ರೇರಿತರಾಗಿ ಕಾಫಿ ಕೃಷಿಕರು ಪಾಲ್ಗೊಂಡು ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಕಾಫಿ ಮಂಡಳಿ ಅಧ್ಯಕ್ಷ ಎಂ. ಎಸ್. ಬೋಜೇಗೌಡ ಕರೆ ನೀಡಿದ್ದಾರೆ.
ಭಾರತದಲ್ಲಿ ಕಾಫಿ ಆಂತರಿಕ ಬಳಕೆ ಹೆಚ್ಚಾದಲ್ಲಿ ಮಾತ್ರ ಅಧಿಕ ದರ ನಿರೀಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಈ ಬಾರಿಯ ವಿಶ್ವ ಕಾಫಿ ಸಮಾವೇಶದಲ್ಲಿ ‘ಬಳಕೆಯೊಂದಿಗೆ ಸುಸ್ಥಿರತೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಏಷ್ಯಾ ರಾಷ್ಟ್ರಗಳಲ್ಲಿ ಕಾಫಿ ಪಾನೀಯ ಹಾಗೂ ಕಾಫಿಯಿಂದ ತಯಾರಿಸಲಾಗುವ ವಿವಿಧ ಉತ್ಪನ್ನಗಳ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ಸಣ್ಣ ಮತ್ತು ದೊಡ್ಡ ಕಾಫಿ ಬೆಳೆಗಾರರು ಪಣತೊಡಬೇಕಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚೀನಾ ಹಾಗೂ ಭಾರತ ವಿಶ್ವದಲ್ಲಿಯೇ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿದ್ದು; ಕಾಫಿ ಆಂತರಿಕ ಬಳಕೆ ಹೆಚ್ಚು ಮಾಡುವ ಹೊಣೆಗಾರಿಕೆ ಎಲ್ಲರ ಮೇಲೆಯೂ ಇದೆ.ಕಾಫಿ ಆನ್‍ಲೈನ್ ಮಾರಾಟ ಅಸಾಧ್ಯ. ಈಗಿರುವ ಖರೀದಿ ವ್ಯವಸ್ಥೆಯೇ ಸರಿ ಇದೆ.ಗುಣಮಟ್ಟ ಪರೀಕ್ಷೆ, ತೇವಾಂಶ ಇತ್ಯಾದಿ ಪರಿಶೀಲನೆ ಆನ್‍ಲೈನ್‍ನಲ್ಲಿ ಸಾಧ್ಯವಿಲ್ಲ. ಮಧ್ಯವರ್ತಿಗಳ ಮೋಸದಿಂದ ಪಾರಾಗಲು ತೋಟದಿಂದಲೇ ನೇರವಾಗಿ ರಫ್ತುಮಾಡಿದ್ದಲ್ಲಿ ಅತ್ಯಧಿಕ ದರವನ್ನು ಭವಿಷ್ಯದಲ್ಲಿ ನಿರೀಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಮುಂದಿನ 5ನೇ ವಿಶ್ವ ಚಿಕ್ಕಮಗಳೂರು, ಮಾ. 10: ಭಾರತದ ಕಾಫಿ ಕೃಷಿಕರು ಸಂಕಷ್ಟದ ದಿನಗಳನ್ನು ಎದುರಿಸುತ್ತಿ ದ್ದಾರೆ. ಕಾಫಿ ದರ ಕುಸಿತ, ಜಾಗತಿಕ ತಾಪಮಾನ, ಅತಿವೃಷ್ಟಿ, ಅನಾವೃಷ್ಟಿ, ಬೆರ್ರಿಬೋರರ್ ಸಮಸ್ಯೆ ಎಲ್ಲವೂ ಇಂದು ನಮ್ಮ ಕೃಷಿಕರಿಗೆ ಪ್ರತಿಕೂಲವಾಗಿದೆ. ಬ್ಯಾಂಕ್‍ನಲ್ಲಿ ಹೊಂದಿಕೊಂಡ ಸಾಲ ಮರುಪಾವತಿಗೂ ಹಲವು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಭಾರತದ ಸಿಂಹಪಾಲು ಕಾಫಿ ಉತ್ಪಾದನೆಯನ್ನು ಕರ್ನಾಟಕ ರಾಜ್ಯ ಉತ್ಪಾದಿಸುತ್ತಿದ್ದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆ. 7,8,9 ರಂದು ಜರುಗಲಿರುವ ‘ವಿಶ್ವ ಕಾಫಿ ಸಮಾವೇಶ ಹಾಗೂ ಎಕ್ಸ್ಪೋ’ ದಲ್ಲಿ ಸ್ವಯಂಪ್ರೇರಿತರಾಗಿ ಕಾಫಿ ಕೃಷಿಕರು ಪಾಲ್ಗೊಂಡು ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಕಾಫಿ ಮಂಡಳಿ ಅಧ್ಯಕ್ಷ ಎಂ. ಎಸ್. ಬೋಜೇಗೌಡ ಕರೆ ನೀಡಿದ್ದಾರೆ.
ಭಾರತದಲ್ಲಿ ಕಾಫಿ ಆಂತರಿಕ ಬಳಕೆ ಹೆಚ್ಚಾದಲ್ಲಿ ಮಾತ್ರ ಅಧಿಕ ದರ ನಿರೀಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಈ ಬಾರಿಯ ವಿಶ್ವ ಕಾಫಿ ಸಮಾವೇಶದಲ್ಲಿ ‘ಬಳಕೆಯೊಂದಿಗೆ ಸುಸ್ಥಿರತೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಏಷ್ಯಾ ರಾಷ್ಟ್ರಗಳಲ್ಲಿ ಕಾಫಿ ಪಾನೀಯ ಹಾಗೂ ಕಾಫಿಯಿಂದ ತಯಾರಿಸಲಾಗುವ ವಿವಿಧ ಉತ್ಪನ್ನಗಳ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ಸಣ್ಣ ಮತ್ತು ದೊಡ್ಡ ಕಾಫಿ ಬೆಳೆಗಾರರು ಪಣತೊಡಬೇಕಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚೀನಾ ಹಾಗೂ ಭಾರತ ವಿಶ್ವದಲ್ಲಿಯೇ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿದ್ದು; ಕಾಫಿ ಆಂತರಿಕ ಬಳಕೆ ಹೆಚ್ಚು ಮಾಡುವ ಹೊಣೆಗಾರಿಕೆ ಎಲ್ಲರ ಮೇಲೆಯೂ ಇದೆ.ಕಾಫಿ ಆನ್‍ಲೈನ್ ಮಾರಾಟ ಅಸಾಧ್ಯ. ಈಗಿರುವ ಖರೀದಿ ವ್ಯವಸ್ಥೆಯೇ ಸರಿ ಇದೆ.ಗುಣಮಟ್ಟ ಪರೀಕ್ಷೆ, ತೇವಾಂಶ ಇತ್ಯಾದಿ ಪರಿಶೀಲನೆ ಆನ್‍ಲೈನ್‍ನಲ್ಲಿ ಸಾಧ್ಯವಿಲ್ಲ. ಮಧ್ಯವರ್ತಿಗಳ ಮೋಸದಿಂದ ಪಾರಾಗಲು ತೋಟದಿಂದಲೇ ನೇರವಾಗಿ ರಫ್ತುಮಾಡಿದ್ದಲ್ಲಿ ಅತ್ಯಧಿಕ ದರವನ್ನು ಭವಿಷ್ಯದಲ್ಲಿ ನಿರೀಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಮುಂದಿನ 5ನೇ ವಿಶ್ವ ಜಲಸಂರಕ್ಷಣೆ,ವನ್ಯಜೀವಿ ಸಂರಕ್ಷಣೆ ಮಾಡುತ್ತಿರುವವರು,ಕಾಡು ಕಾಯುತ್ತಿರುವವರು ಕಾಫಿ ಕೃಷಿಕರು. ಕಾಫಿ ತೋಟಗಳಿರುವ ಪ್ರದೇಶದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯ ಅಗತ್ಯವಿಲ್ಲ ಎಂದು ಬೋಜೇಗೌಡ ಮಾರ್ಮಿಕವಾಗಿ ನುಡಿದರು.
ಕಾಫಿ ತೋಟದ ಜೀವನ ಆರೋಗ್ಯಕರ. ಉತ್ತಮ ಗಾಳಿ,ನೀರು, ಆಹಾರ ಇಲ್ಲಿ ಸಿಗುತ್ತದೆ. ಪರಿಸರ ಸಮತೋಲನವನ್ನು ಕಾಫಿ ಬೆಳೆಗಾರ ಕಾಪಾಡಿರುವದರಿಂದಾಗಿ ತಾಪಮಾನದಲ್ಲಿನ ಏರು ಪೇರು ರಾಜ್ಯದಲ್ಲಿ ಕಡಿಮೆ ಇದೆ. ಕಾಫಿ ಕೃಷಿಕರು ಸಾವಿರಾರು ವರ್ಷದಿಂದ ಪ್ರಕೃತಿಯನ್ನು ಪೂಜಿಸುತ್ತಾ ಬಂದವರು. ಇತ್ತೀಚೆಗೆ ಕಾಫಿ ನಾಡಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಹಲವರು ಸಂತ್ರಸ್ತರಾಗಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಿಹಾರ ಕಾರ್ಯದಲ್ಲಿ ವಿಳಂಬ ಮಾಡದೆ, ರೈತರಲ್ಲಿ ಉತ್ಸಾಹ ಮೂಡಿಸುವ ಕೆಲಸ ಮಾಡಬೇಕೆಂದು ಸಲಹೆಯಿತ್ತರು.
ಕೈ ಜೋಡಿಸಬೇಕಾಗಿದೆ
ಬೆಂಗಳೂರು ಅರಮನೆ ಮೈದಾನದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಲಿರುವ ವಿಶ್ವ ಕಾಫಿ ಸಮಾವೇಶದಲ್ಲಿ ಬೆಳೆಗಾರರನ್ನು ಹೆಚ್ಚಾಗಿ ಪಾಲ್ಗೊಳ್ಳುವಂತೆ ಮಾಡಲು ರಾಜ್ಯದ ವಿವಿಧ ಬೆಳೆಗಾರ ಸಂಘಟನೆಗಳು ಶ್ರಮವಹಿಸಬೇಕಾಗಿದೆ. ಇಂಡಿಯಾ ಕಾಫಿ ಟ್ರಸ್ಟ್ ಹಾಗೂ ಸಮಾವೇಶದ ಅಧ್ಯಕ್ಷ ಅನಿಲ್‍ಕುಮಾರ್ ಭಂಡಾರಿ ಅವರು ಭಾರತದ ಕಾಫಿಯನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸಲು ಹಲವು ವರ್ಷಗಳಿಂದ ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್ ನೇತೃತ್ವದಲ್ಲಿ ಕಾಫಿ ಬೆಳೆಗಾರರಿಂದ ತಲಾ 2 ಕೆ.ಜಿ.ಪಾರ್ಚ್‍ಮೆಂಟ್ ಅಥವಾ 4 ಕೆ.ಜಿ. ಚೆರ್ರಿ ಕಾಫಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯ ಕಾಫಿ ಕೃಷಿಕರು ವಿವಿಧ ಬೆಳೆಗಾರರ ಸಂಘಟನೆ ಗಳಿಂದ ಈ ಬಗ್ಗೆ ಮಾಹಿತಿ ಹೊಂದಿಕೊಂಡು ವಿಶ್ವ ಕಾಫಿ ಸಮಾವೇಶ ಯಶಸ್ಸಿಗೆ ಸಹಕಾರ ನೀಡಲು ಅವರು ಕರೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9481535939,9611611922(ಕೆಜಿಎಫ್) ಅಥವಾ ಪ್ರಚಾರ ವಿಭಾಗದ ಕಾರ್ಯಕ್ರಮ ಸಂಯೋಜಕ ಟಿ.ಎಲ್.ಶ್ರೀನಿವಾಸ್ ಇವರ 9945454133, 9483248111 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
-ಟಿ.ಎಲ್.ಎಸ್.