ಮಡಿಕೇರಿ, ಮಾ. 10: ಇತ್ತೀಚೆಗೆ ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ರೋಟರಿಕ್ಲಬ್ ಸದಸ್ಯ ಡಾ. ಚಂದ್ರಶೇಖರ್ ಅವರು ಪ್ರೌಢಶಾಲಾ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ಹಲವಾರು ಅಂಶಗಳನ್ನು ಪರೀಕ್ಷೆಗೆ ಹೇಗೆ ಪೂರ್ವ ತಯಾರಿಯಾಗಬೇಕು ವಿದ್ಯಾಭ್ಯಾಸದಲ್ಲಿ ಏಕಾಗ್ರತೆ, ಪಂಚೇಂದ್ರೀಯಗಳ ಮಹತ್ವ. ಸ್ವವ್ಯಕ್ತಿತ್ವ ಅಭಿವೃದ್ಧಿ ಹಾಗೂ ಕೊರೊನಾ ವೈರಸ್ ಹರಡುವ ಬಗ್ಗೆ ವಿವರವಾಗಿ ಮನವರಿಕೆ ಮಾಡಿಕೊಟ್ಟರು.

ಸದಸ್ಯ ಮಾಚಿಮಾಡ ಕಿಶೋರ್ ಮಾದಪ್ಪ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಅಗತ್ಯವಾದ ವಿಷಯಗಳನ್ನು ಮನವರಿಕೆ ಮಾಡಿಕೊಟ್ಟರು. ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ವಿಜ್ಞಾನ ಶಿಕ್ಷಕರಾದ ಸಿದ್ದರಾಜು ಮತ್ತು ಸುಬ್ರಮಣಿ ಅವರು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಚಟುವಟಿಕೆ ನಡೆಸಿದರು. ಸೌರಮಂಡಲವನ್ನು ದೃಶ್ಯಾವಳಿ ಮಾದ್ಯಮದ ಮೂಲಕ ವಿದ್ಯಾರ್ಥಿಗಳಿಗೆ ವೀಕ್ಷಿಸಲು ಅವಕಾಶ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ರೊಟೇರಿಯನ್ ಸಜನ್ ಚಂಗಪ್ಪ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಉಮಾ, ಶಿಕ್ಷಕ ವೃಂದದವರು. ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಾಲೆಯ ಇಂಟರ್ಯಾಕ್ಟ್ ಕ್ಲಬ್‍ನ ಸದಸ್ಯೆ ರೂಪಶ್ರೀ ಉಪಸ್ಥಿತರಿದ್ದರು.