ಶನಿವಾರಸಂತೆ, ಮಾ.10: ಆಲೂರು ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಕಣಗಾಲು ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ಲೋಕೇಶ್(45) ಹುಣಸೆ ಮರದಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ದೊಡ್ಡ ಕಣಗಾಲು ಗ್ರಾಮದ ನಿವಾಸಿ ಉತ್ತಯ್ಯ ಅವರ ಮನೆಗೆ ಲೋಕೇಶ್ ಹುಣಸೆ ಹಣ್ಣು ಕೆಡವಲು ತೆರಳಿದ್ದು, ಮರದಿಂದ ಆಕಸ್ಮಿಕÀವಾಗಿ ಆಯ ತಪ್ಪಿ ಬಿದ್ದು ಮೃತ ಪಟ್ಟಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಶಿವಲಿಂಗ ಅವರು ಪ್ರಕರಣ ದಾಖಲಿಸಿದ್ದಾರೆ.