ನಾಪೆÇೀಕ್ಲು, ಮಾ. 10: ಸರಕಾರ ಗ್ರಾಮೀಣ ಬಡ ಮಕ್ಕಳ ಏಳಿಗೆಗಾಗಿ ಶುದ್ಧ ಕುಡಿಯುವ ನೀರು, ಪೌಷ್ಟಿಕ ಆಹಾರ, ಆರೋಗ್ಯ ಸೌಲಭ್ಯ ಸೇರಿದಂತೆ ವಿವಿಧ ಸವಲತ್ತುಗಳನ್ನು ನೀಡುತ್ತಿದೆ. ಆದರೆ ಮೂಲಭೂತ ಸೌಕರ್ಯ ಗಳಲ್ಲಿ ಒಂದಾದ ಕುಡಿಯುವ ನೀರೇ ಇಲ್ಲ ಎಂದಾದರೆ ಸರಕಾರದ ಯೋಜನೆಗೆ ಅರ್ಥವಿ ದೆಯೇ? ಇದಕ್ಕೆ ಸಾಕ್ಷಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಟೇರಿ ಅಂಗನವಾಡಿ ಕೇಂದ್ರ. ಇಲ್ಲಿ ಸುಮಾರು 25 ಮಕ್ಕಳು ಅಂಗನ ವಾಡಿಗೆ ಆಗಮಿಸು ತ್ತಿದ್ದಾರೆ. ಇಲ್ಲಿ ನೀರಿನ ಸೌಲಭ್ಯ ಇಲ್ಲ. ನೀರು ಒದಗಿಸಬೇಕಾದ ಗ್ರಾಮ ಪಂಚಾಯಿತಿ ಆಡಳಿತ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಂಡು ಬರುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಇಲ್ಲಿಗೆ ನೀರು ಪೂರೈಸುವ ಸಲುವಾಗಿ ಗ್ರಾಮ ಪಂಚಾಯಿತಿಯು ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ನೀರಿನ ತೊಟ್ಟಿ ನಿರ್ಮಿಸಿದೆ. ಆದರೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಇದಕ್ಕೆ ಇನ್ನೂ ನೀರಿನ ಪೂರೈಕೆಯಾಗಿಲ್ಲ ಎನ್ನಲಾಗಿದೆ. ಈ ವಿಭಾಗಕ್ಕೆ ಸಮೀಪದ ಕಕ್ಕಬ್ಬೆ ಹೊಳೆಯಿಂದ ನೀರು ಪೂರೈಸಲು ಗ್ರಾಮ ಪಂಚಾಯಿತಿಯು ಕ್ರಮಕೈಗೊಂಡಿದೆ. ಆದರೆ ರಸ್ತೆ ಕಾಮಗಾರಿಯ ಕಾರಣದಿಂದ ಪೈಪ್ ತುಂಡಾಗಿದ್ದು, ಈ ವ್ಯಾಪ್ತಿಯ ಜನರಿಗೆ ಕೂಡ ಕುಡಿಯುವ ನೀರು ಇಲ್ಲದಂತಾಗಿದೆ.
ರಸ್ತೆ ಕಾಮಗಾರಿಯ ಕಾರಣದಿಂದ ನೀರಿನ ಪೈಪ್‍ನಲ್ಲಿ ಮಣ್ಣು ತುಂಬಿಕೊಂಡಿದೆ. ಕೂಡಲೇ ದುರಸ್ತಿಪಡಿಸಿ ನೀರು ಪೂರೈಕೆ ಮಾಡಲಾಗುವದು ಎಂದು ನಾಪೆÇೀಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ ಭರವಸೆ ನೀಡಿದ್ದಾರೆ.
ಈ ನಡುವೆ ಅಂಗನವಾಡಿಗೆ ನೀರಿಲ್ಲದ್ದನ್ನು ಗಮನಿಸಿದ ಸಮೀಪದ ಮೂಟೇರಿ ಉಮಾಮಹೇಶ್ವರಿ ದೇವಳದ ಆಡಳಿತ ಮಂಡಳಿಯು ಅಂಗನವಾಡಿಗೆ ಬೇಕಾದ ನೀರನ್ನು ಒದಗಿಸಿ ಮಾನವೀಯತೆ ಮೆರೆಯುತ್ತಿದೆ.
-ಪಿ.ವಿ. ಪ್ರಭಾಕರ್