ನಾಪೆÇೀಕ್ಲು, ಮಾ. 8: ಸಮೀಪದ ಪಾಲೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರ ಸಮಿತಿ ಹಾಗೂ ಭಕ್ತ ಜನಸಂಘದ ವತಿಯಿಂದ ಸುಮಾರು 13 ಲಕ್ಷ ರೂ. ವೆಚ್ಚದಲ್ಲಿ ನೂತನ ಧ್ವಜಪ್ರತಿಷ್ಠೆ ಹಾಗೂ ಮಹಾಬಲಿಪೀಠದ ಪುನರ್‍ಪ್ರತಿಷ್ಠೆ ವಿಜೃಂಭಣೆಯಿಂದ ನಡೆಯಿತು. ಕುಯ್ಯಂಗೇರಿಯ 9 ಗ್ರಾಮಗಳಿಗೆ ಒಳಪಟ್ಟ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೇವಳದಲ್ಲಿ ಕ್ಷೇತ್ರದ ತಂತ್ರಿಗಳಾದ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧ್ವಜಸ್ತಂಭವನ್ನು ತಾಮ್ರದ ಮೇಲುಹೊದಿಕೆ ಹಾಗೂ ಕಲ್ಲಿನ ಪೀಠದೊಂದಿಗೆ ಶಾಶ್ವತವಾಗಿ ನಿರ್ಮಾಣ ಮಾಡಿರುವದನ್ನು ಪ್ರತಿಷ್ಟಾಪಿಸಲಾಯಿತು. ಮಹಾಬಲಿ ಪೀಠದ ಪುನರ್‍ಪ್ರತಿಷ್ಠೆ ಕಾರ್ಯ ನೆರವೇರಿತು. ಭಾನುವಾರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು. ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಸಭಾ ಕಾರ್ಯಕ್ರಮ: ಮುಖ್ಯ ಅತಿಥಿಯಾಗಿ (ಮೊದಲ ಪುಟದಿಂದ) ಪಾಲ್ಗೊಂಡ ಒಡಿಯೂರು ಕ್ಷೇತ್ರದ ಗುರು ದೇವಾನಂದ ಸ್ವಾಮೀಜಿ ಮಾತನಾಡಿ ಶಿವತತ್ವವನ್ನು ಆರಾಧಿಸಿ ಬದುಕನ್ನು ರೂಪಿಸಬೇಕು. ಬದುಕನ್ನು ಹೇಗೆ ರೂಪಿಸಬೇಕು ಎನ್ನುವದಕ್ಕೆ ಪೂರಕವಾಗಿ ದೇವಳಗಳು ಶ್ರದ್ಧಾ ಕೇಂದ್ರಗಳಾಗಿರುತ್ತವೆ. ಭಾರತ ಎಂದರೆ ಬೆಳಕಿನಿಂದ ತುಂಬಿರುವಂತದ್ದು ಭಾರತೀಯ ಸಂಸ್ಕøತಿ ವಿಶ್ವಕ್ಕೆ ಮಾದರಿ. ಅಂತರಂಗದ ಬೆಳಕನ್ನು ಉದ್ದೀಪನ ಗೊಳಿಸುವ ಭಾರತದಲ್ಲಿ ಅಧ್ಯಾತ್ಮದ ಬೆಳಕಿದ್ದು, ಅದರಿಂದ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

ಕ್ಷೇತ್ರದ ತಂತ್ರಿ ಉಚ್ಚಿಲತ್ತಾಯ ಪದ್ಮನಾಭ ಮಾತನಾಡಿ ದೇಹಕ್ಕೆ ಹೇಗೆ ಜೀವಶಾಸ್ತ್ರ ಆಧಾರವೋ ಹಾಗೆಯೇ ದೇವಸ್ಥಾನಕ್ಕೆ ಶಿಲ್ಪಶಾಸ್ತ್ರ ಆಧಾರ. ಜ್ಞಾನ ಪ್ರಾಪ್ತಿಯಾದಾಗ ನಮಗೆ ಪರಮಾತ್ಮನ ಅನುಭವ ಬರುತ್ತದೆ. ಪ್ರತಿಯೊಬ್ಬರಲ್ಲೂ ದೈವತ್ವವನ್ನು ಕಾಣಬೇಕು. ಅದೇ ಭಾರತೀಯ ಸಂಸ್ಕøತಿ ಎಂದರು. ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚೌರೀರ ಸಿ.ಬೋಪಯ್ಯ, ಮಡಿಕೇರಿ ತಹಶೀಲ್ದಾರ್ ಪಿ.ಎಸ್.ಮಹೇಶ್ ಮಾತನಾಡಿದರು.

ಜೀರ್ಣೋದ್ಧಾರ ಕಾರ್ಯದಲ್ಲಿ ಕೈಜೋಡಿಸಿದ ದಾನಿಗಳಾದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಭಕ್ತಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ತಂತ್ರಿಗಳಾದ ನೀಲೇಶ್ವರ ಪದ್ಮನಾಭ ತಂತ್ರಿ, ಅಯ್ಯುಡ ವೇಣು ಉತ್ತಪ್ಪ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ರಾದ ಚೌರೀರ ಜಗತ್, ಧ್ವಜಪ್ರತಿಷ್ಠೆಗೆ ನೆರವು ನೀಡಿದ ಪ್ರಕಾಶ್, ಶಿಲ್ಪಿ ದೇವರಾಜ್, ಅನಂತಕುಮಾರ್, ನಿವೃತ್ತ ತಹಶೀಲ್ದಾರ್ ಪಿ.ಎಸ್. ಮೋಹನ್, ತಹಶೀಲ್ದಾರ್ ಪಿ.ಎಸ್.ಮಹೇಶ್, ಉದ್ಯಮಿ ವೆಂಕಟೇಶ್, ನೆಯ್ಯಣೀರ ದಿನೇಶ್, ಹಾಗೂ ಹರೀಶ್ ಇವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ತಾಳತ್ತಮನೆಯ ನೇತಾಜಿ ಭಜನಾ ಮಂಡಳಿಯ ಸದಸ್ಯರು ಭಜನೆ ನೆರವೇರಿಸಿದರು. ರಾಧಾ ಹರೀಶ್ ನಿರೂಪಿಸಿದರು. ವೇದಿಕೆಯಲ್ಲಿ ಬೆಂಗಳೂರಿನ ನ್ಯಾಯಾಧೀಶ ನೆಯ್ಯಣೀರ ದಿನೇಶ್, ಗೌರವಾಧ್ಯಕ್ಷ ಅಯ್ಯುಡ ವೇಣು ಉತ್ತಪ್ಪ, ಭಕ್ತಜನ ಸಂಘದ ಪದಾಧಿಕಾರಿಗಳು ಇದ್ದರು.

-ದುಗ್ಗಳ, ಪ್ರಭಾಕರ್