ಬೆಂಗಳೂರು, ಮಾ. 7: ವೀರಾಜಪೇಟೆ ವಿಭಾಗದ ಎಲ್ಲ ಅರಣ್ಯ ವಲಯಗಳನ್ನು ರದ್ದುಗೊಳಿಸಿ ಮಡಿಕೇರಿ ವಿಭಾಗಕ್ಕೆ ವಿಲೀನಗೊಳಿಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹಿರಿಯ ಅರಣ್ಯಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಮುಂದೆ ವೀರಾಜಪೇಟೆ ವಿಭಾಗದಲ್ಲಿದ್ದ ತಿತಿಮತಿ, ಪೊನ್ನಂಪೇಟೆ, ವೀರಾಜಪೇಟೆ, ಮಾಕುಟ್ಟ ಹಾಗೂ ಮುಂಡ್ರೋಟು ಅರಣ್ಯ ವಲಯಗಳ ಪ್ರತ್ಯೇಕ ಅಸ್ತಿತ್ವ ಕೊನೆಗೊಳ್ಳಲಿದೆ. ಈ ಎಲ್ಲ ವಲಯಗಳು ಸೇರಿದಂತೆ ವೀರಾಜಪೇಟೆ ವಿಭಾಗದ ಅರಣ್ಯ ಕಚೇರಿ ಆಡಳಿತವನ್ನು ಮಡಿಕೇರಿಗೆ ವರ್ಗಾಯಿಸಲಾಗುವುದು.

ಬೆಂಗಳೂರಿನಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪÀಡೆ ಮುಖ್ಯಸ್ಥರು) ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಅಂತಿಮವಾಗಿ ಮಾರ್ಚ್ 9 ರಂದು ಸಮನ್ವಯ ಸಮಿತಿ ಸಭೆಯೊಂದರಲ್ಲಿ ನಿರ್ಧರಿಸಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಅದೇ ರೀತಿ ಹುಣಸೂರು ಅರಣ್ಯ ವಿಭಾಗವನ್ನು ಮೈಸೂರು ವಿಭಾಗಕ್ಕೆ ವಿಲೀನಗೊಳಿಸಲಾಗಿದೆ.

ಸಭೆಯಲ್ಲಿ ನಡೆದ ಚರ್ಚೆಯಂತೆ ರಾಜ್ಯದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಬ್ಬಂದಿ ಮತ್ತು ನೇಮಕಾತಿ) ಅವರು ಅಭಿಪ್ರಾಯ ವ್ಯಕ್ತಪಡಿಸಿ, ಅರಣ್ಯ ವೃತ್ತಗಳ ಮರು ವಿನ್ಯಾಸದಿಂದ ಜೇಷ್ಠತಾ ಪಟ್ಟಿಗಳನ್ನು ಅಂತಿಮಗೊಳಿಸುವುದು ಕ್ಲಿಷ್ಟಕರವಾಗುತ್ತದೆ ಎಂದರು. ಅಲ್ಲದೆ, ಈಗಾಗಲೇ ಸಿಬ್ಬಂದಿಯನ್ನು ಜೇಷ್ಠತಾ ಪಟ್ಟಿಯಲ್ಲಿ ಲೋಪಗಳನ್ನು ಸರಿಪಡಿಸಲು ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಇನ್ನು ಸರಕಾರಕ್ಕೆ ವರದಿ ಸಲ್ಲಿಸಬೇಕಾಗಿದೆ. ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ಬಳಿಕ ಮತ್ತು ರಾಜ್ಯಮಟ್ಟದ ಜೇಷ್ಠತಾ ಪಟ್ಟಿ ಪ್ರಕಟವಾದ ನಂತರ ವೃತ್ತಗಳ ಮರು ವಿನ್ಯಾಸಕ್ಕೆ ಪ್ರಸ್ತಾವನೆ ಸಲ್ಲಿಸುವುದು ಸೂಕ್ತವೆಂದು ಸಭಾಧ್ಯಕ್ಷರ ಗಮನಕ್ಕೆ ತಂದರು.

ಈ ಕುರಿತು ಚರ್ಚಿಸಿ ಜೇಷ್ಠತಾ ಪಟ್ಟಿಗಳು ಅಂತಿಮಗೊಂಡ ನಂತರ ವೃತ್ತ ಮತ್ತು ವಿಭಾಗಗಳ ಮರು ವಿನ್ಯಾಸ ಪ್ರಸ್ತಾವನೆಯನ್ನು ಅಂತಿಮ ನಿರ್ಣಯಕ್ಕಾಗಿ ಸಮನ್ವಯ ಸಮಿತಿಗೆ ಸಲ್ಲಿಸಲು ನಿರ್ಧರಿಸಲಾಯಿತು.

1990ರಲ್ಲಿ ಅನೇಕ ಸಂಘಟನೆಗಳ ಹೋರಾಟದ ಫಲವಾಗಿ ಹುಣಸೂರು ವಿಭಾಗದಲ್ಲಿದ್ದ ವೀರಾಜಪೇಟೆ ತಾಲೂಕಿನ ಅರಣ್ಯ ಆಡಳಿತವನ್ನು ವೀರಾಜಪೇಟೆ ವಿಭಾಗಕ್ಕೆ ಪ್ರತ್ಯೇಕವಾಗಿ ವಿಂಗಡಿಸಿ ಸ್ಥಾಪನೆಗೊಳಿಸಲಾಗಿತ್ತು. ಸಭೆಯಲ್ಲಿ ನಡೆದ ಚರ್ಚೆಯಂತೆ ರಾಜ್ಯದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಬ್ಬಂದಿ ಮತ್ತು ನೇಮಕಾತಿ) ಅವರು ಅಭಿಪ್ರಾಯ ವ್ಯಕ್ತಪಡಿಸಿ, ಅರಣ್ಯ ವೃತ್ತಗಳ ಮರು ವಿನ್ಯಾಸದಿಂದ ಜೇಷ್ಠತಾ ಪಟ್ಟಿಗಳನ್ನು ಅಂತಿಮಗೊಳಿಸುವುದು ಕ್ಲಿಷ್ಟಕರವಾಗುತ್ತದೆ ಎಂದರು. ಅಲ್ಲದೆ, ಈಗಾಗಲೇ ಸಿಬ್ಬಂದಿಯನ್ನು ಜೇಷ್ಠತಾ ಪಟ್ಟಿಯಲ್ಲಿ ಲೋಪಗಳನ್ನು ಸರಿಪಡಿಸಲು ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಇನ್ನು ಸರಕಾರಕ್ಕೆ ವರದಿ ಸಲ್ಲಿಸಬೇಕಾಗಿದೆ. ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ಬಳಿಕ ಮತ್ತು ರಾಜ್ಯಮಟ್ಟದ ಜೇಷ್ಠತಾ ಪಟ್ಟಿ ಪ್ರಕಟವಾದ ನಂತರ ವೃತ್ತಗಳ ಮರು ವಿನ್ಯಾಸಕ್ಕೆ ಪ್ರಸ್ತಾವನೆ ಸಲ್ಲಿಸುವುದು ಸೂಕ್ತವೆಂದು ಸಭಾಧ್ಯಕ್ಷರ ಗಮನಕ್ಕೆ ತಂದರು.

ಈ ಕುರಿತು ಚರ್ಚಿಸಿ ಜೇಷ್ಠತಾ ಪಟ್ಟಿಗಳು ಅಂತಿಮಗೊಂಡ ನಂತರ ವೃತ್ತ ಮತ್ತು ವಿಭಾಗಗಳ ಮರು ವಿನ್ಯಾಸ ಪ್ರಸ್ತಾವನೆಯನ್ನು ಅಂತಿಮ ನಿರ್ಣಯಕ್ಕಾಗಿ ಸಮನ್ವಯ ಸಮಿತಿಗೆ ಸಲ್ಲಿಸಲು ನಿರ್ಧರಿಸಲಾಯಿತು.

1990ರಲ್ಲಿ ಅನೇಕ ಸಂಘಟನೆಗಳ ಹೋರಾಟದ ಫಲವಾಗಿ ಹುಣಸೂರು ವಿಭಾಗದಲ್ಲಿದ್ದ ವೀರಾಜಪೇಟೆ ತಾಲೂಕಿನ ಅರಣ್ಯ ಆಡಳಿತವನ್ನು ವೀರಾಜಪೇಟೆ ವಿಭಾಗಕ್ಕೆ ಪ್ರತ್ಯೇಕವಾಗಿ ವಿಂಗಡಿಸಿ ಸ್ಥಾಪನೆಗೊಳಿಸಲಾಗಿತ್ತು.