ಮಡಿಕೇರಿ, ಮಾ. 7: ಕರ್ನಾಟಕ ಸರಕಾರದ ಅದಿಸೂಚನೆ ಸಂಖ್ಯೆ ಆರ್‍ಡಿ01/ಎಲ್‍ಆರ್‍ಡಿ 2020 ದಿ. 6.3.2020ರ ಮೇರೆಗೆ ವೀರಾಜಪೇಟೆ ತಾಲೂಕಿನ ದ. ಭಾಗದಲ್ಲಿರುವ ಪೊನ್ನಂಪೇಟೆ, ಬಾಳೆಲೆ, ಶ್ರೀಮಂಗಲ ಮತ್ತು ಹುದಿಕೇರಿ, ಹೋಬಳಿಗಳನ್ನು ಒಳಗೊಂಡ 49 ಕಂದಾಯ ಗ್ರಾಮಗಳು, 21 ಉಪಗ್ರಾಮಗಳು, ನಾಗರಹೊಳೆ ಅಭಯಾರಣ್ಯ ಸೇರಿ 6 ಅರಣ್ಯಗ್ರಾಮಗಳು, 21 ಗ್ರಾಮ ಪಂಚಾಯಿತಿಗಳನ್ನೊಳಗೊಂಡು ಅಂದಾಜು 1025 ಚದರ ವಿಸ್ತೀರ್ಣವನ್ನು ಹೊಂದಿರುವ ಪೊನ್ನಂಪೇಟೆ ತಾಲೂಕು ಅಸ್ತಿತ್ವಕ್ಕೆ ಬಂದಿದ್ದು, ತಾಲೂಕು ಕಚೇರಿಯ ಪೊನ್ನಂಪೇಟೆಯಲ್ಲಿರುವ ಸರಕಾರಿ ಕಟ್ಟಡದಲ್ಲಿ (ಈ ಹಿಂದಿನ ನ್ಯಾಯಾಲಯ ಆವರಣ) ಮುಂದಿನ ತಿಂಗಳಿನಲ್ಲಿ ರಾಜ್ಯದ ಮುಖ್ಯ ಮಂತ್ರಿಗಳಿಂದ ಉದ್ಘಾಟನೆ ಗೊಳ್ಳಲಿದೆ.