ಕೂಡಿಗೆ, : ಮಾ. 8 : 78 ಕೆ. ಜಿ. ಮೌಲ್ಯದ ಗಂಧದ ಮರವನ್ನು ಅಕ್ರಮವಾಗಿ ಸಾಗಿಸಲು ಪ್ರಯತ್ನಿಸುತ್ತಿದ್ದಾಗ ಮರ ಹಾಗೂ ಆಟೋ ಸಹಿತ ಆರೋಪಿಯನ್ನು ಬಂಧಿಸಿರುವ ಘಟನೆ ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಚಿನ್ನೇನಹಳ್ಳಿ ಗ್ರಾಮ ವ್ಯಾಪ್ತಿಯ ಅರಣ್ಯದಲ್ಲಿ ನಡೆದಿದೆ.
ಚಿನ್ನೇನಹಳ್ಳಿಯಲ್ಲಿ ಪಿರಿಯಾಪಟ್ಟಣ ತಾಲೂಕಿನ ಹಂದಿಗುಡ್ಡದ ಐದು ಮಂದಿ ಹಾಗೂ ಪಿರಿಯಾಪಟ್ಟಣ ಮಂಚದೇವನ ಹಳ್ಳಿಯ ಆಟೋ ಚಾಲಕ ಸೇರಿದಂತೆ ಆರು ಮಂದಿ ಆರೋಪಿಗಳು ಗಂಧದ ಮರವನ್ನು ಆಟೋದಲ್ಲಿ ಸಾಗಿಸಲು ಸಿದ್ದವಾಗಿದ್ದ ಸಂದರ್ಭ ಅರಣ್ಯ ಇಲಾಖೆಯ ಅಧಿಕಾರಿಗಳು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂದರ್ಭ ಐವರು ಆರೋಪಿಗಳು ಪರಾರಿಯಾಗಿದ್ದು ಆಟೋ ಚಾಲಕ ಎಂ. ಕೆ. ದೇವರಾಜು ಹಾಗೂ ಮಾಲು ಸಮೇತ ವಾಹನವನ್ನು ವಶಪಡಿಸಿ ಕೊಂಡಿದ್ದಾರೆ. ತಾಲೂಕು ವಲಯ ಅರಣ್ಯ ಅಧಿಕಾರಿ ಶರ್ಮ ಮಾರ್ಗ ದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನೆಹರು ನೇತೃತ್ವದಲ್ಲಿ ಹೆಬ್ಬಾಲೆ ಉಪವಲಯ ಅರಣ್ಯಾಧಿಕಾರಿ ಭರತ್, ಅರಣ್ಯ ರಕ್ಷಕರಾದ ರಾಜಣ್ಣ, ಪ್ರಭಾರ ಅರಣ್ಯ ರಕ್ಷಕ ಶ್ರೀಕಾಂತ್, ಅರಣ್ಯ ವೀಕ್ಷಕ ರಾಜಪ್ಪ, ಶಿವಣ್ಣ,ರಕ್ಷಿತ್,ವೇದ,ವರುಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.