ಮಡಿಕೇರಿ, ಮಾ. 8: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಾಮಂಡಲ ಮಾತೃಮಂಡಳಿ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹವ್ಯಕ ಮಹಿಳೆಯರಿಗಾಗಿ ಒಂದು ಸಣ್ಣ ಕಥಾಸ್ಪರ್ಧೆ ಆಯೋಜಿಸಿದೆ.
ಅಖಿಲ ಭಾರತ ಮಟ್ಟದಲ್ಲಿ, ಹವ್ಯಕ ಮಹಿಳೆಯರು (ವಯೋಮಿತಿ ಇಲ್ಲ). ಹವ್ಯಕ ಭಾಷೆ, ಈವರೆಗಿನ ಪ್ರಥಮ ವಿಜೇತೆಯರಿಗೆ ಅವಕಾಶ ಇಲ್ಲ. ಈ ವರೆಗೆ ಪ್ರಕಟ ಆಗದ ಸಾಮಾಜಿಕ ಕಥೆ, ಸಾಧಾರಣ ಎಂಟು ಪುಟಕ್ಕೆ ಮೀರದೆ, ಕಾಗದದ ಒಂದೇ ಬದಿಗೆ ಸ್ಪುಟವಾಗಿ (ಟೈಪ್ ಮಾಡಿದ್ದಾದರೆ ಉತ್ತಮ. ಎರಡು ಸಾವಿರ ಪದಗಳು) ಬರೆದು, ಹೆಸರು, ವಿಳಾಸ ಬೇರೆ ಬರೆದು ಪಿನ್ ಮಾಡಿರಬೇಕು. ಇಮೇಲ್ನಲ್ಲ್ಲಿ ಕಳುಹಿಸುವುದು ಬೇಡ.
ಆಸಕ್ತರು 30.5.2020ರ ಮೊದಲು ವಿಜಯಾ ಸುಬ್ರಮಣ್ಯ, ಕಾರ್ಯದರ್ಶಿ, ಕೊಡಗಿನ ಗೌರಮ್ಮ ಕಥಾಸ್ಪರ್ಧೆ, ಕಾರ್ತಿಕೇಯ, ನಾರಾಯಣ ಮಂಗಲ, ಕುಂಬಳೆ-671321, ಕಾಸರಗೋಡು ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬಹುದು. ಮೊ. 8547214125.