ಕೂಡಿಗೆ, ಮಾ. 8: ಜಿಲ್ಲಾ ಸಾವಯವ ಕೇಂದ್ರದ ವತಿಯಿಂದ ಕೂಡಿಗೆಯ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಒಂದು ದಿನದ ಸಾವಯವ ಕೃಷಿ ಮಾನದಂಡ ತರಬೇತಿ ಕಾರ್ಯಕ್ರಮವು ನಡೆಯಿತು. ಉದ್ಘಾಟನೆಯನ್ನು ರಾಜ್ಯ ಸಾವಯವ ಪ್ರಮಾಣಿಕೃತ ಸಂಸ್ಥೆಯ ಉಪನಿರ್ದೆಶಕ ಪರಶಿವಮೂರ್ತಿ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಎಸ್. ರಾಜಶೇಖರ ಮಾತನಾಡಿ ರೈತರು ತಮ್ಮ ಜಮೀನಿನಲ್ಲಿ ಬೇಸಾಯ ಮಾಡುವಾಗ ಸಾವಯವ ಗೊಬ್ಬರ ಉಪಯೋಗಿಸುವಂತೆ ತಿಳಿಸಿದರು. ವೇದಿಕೆಯಲ್ಲಿ ಕೂಡಿಗೆ ಕೃಷಿ ಕ್ಷೇತ್ರದ ಸಹಾಯಕ ನಿರ್ದೇಶಕಿ ಗೌರಿ, ತಾಂತ್ರಿಕ ಅಧಿಕಾರಿ ನಳಿನಾಕ್ಷಿ, ಸಾವಯವ ಸಂಸ್ಥೆಯ ಅಧಿಕಾರಿ ಪುಟ್ಟಸ್ವಾಮಿ, ಸತೀಶ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.