ಸುಂಟಿಕೊಪ್ಪ, ಮಾ. 7: ರಾಜ್ಯದ ಹಲವೆಡೆ ಭೂಮಿ ಕಬಳಿಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರಿ ಹಾಗೂ ಖಾಸಗಿ ಅಸ್ತಿಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣಗಳು ಸರಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅದನ್ನು ತಡೆಯುವ ದಿಸೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚತಂತ್ರ ಮತ್ತು ಇ-ಸ್ವತ್ತು ಯೋಜನೆಯನ್ನು ಸರಕಾರವು 7 ವರ್ಷಗಳ ಹಿಂದೆ ಜಾರಿಗೆ ತಂದಿತು. ಪ್ರತಿ ಗ್ರಾಮ ಪಂಚಾಯಿತಿಯ ಎಲ್ಲಾ ಕಂದಾಯ ಗ್ರಾಮಗಳನ್ನು ಸೇರ್ಪಡೆಗೊಳಿಸುವಂತೆ ಆದೇಶ ಹೊರಡಿಸಲಾಗಿತ್ತು. ಕೆಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳು ಎಸಗಿದ ಪ್ರಮಾದದಿಂದ ಸುಂಟಿಕೊಪ್ಪ, ನಾರ್ಗಾಣೆ ಸೇರಿದಂತೆ ಜಿಲ್ಲೆಯ ಹಲವು ಗ್ರಾಮಗಳು ಕಣ್ಮೆರೆಯಾಗಿರುವ ನಿದರ್ಶನಗಳು ದೊರೆತಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸುಂಟಿಕೊಪ್ಪ, ಮಾ. 7: ರಾಜ್ಯದ ಹಲವೆಡೆ ಭೂಮಿ ಕಬಳಿಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರಿ ಹಾಗೂ ಖಾಸಗಿ ಅಸ್ತಿಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣಗಳು ಸರಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅದನ್ನು ತಡೆಯುವ ದಿಸೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚತಂತ್ರ ಮತ್ತು ಇ-ಸ್ವತ್ತು ಯೋಜನೆಯನ್ನು ಸರಕಾರವು 7 ವರ್ಷಗಳ ಹಿಂದೆ ಜಾರಿಗೆ ತಂದಿತು. ಪ್ರತಿ ಗ್ರಾಮ ಪಂಚಾಯಿತಿಯ ಎಲ್ಲಾ ಕಂದಾಯ ಗ್ರಾಮಗಳನ್ನು ಸೇರ್ಪಡೆಗೊಳಿಸುವಂತೆ ಆದೇಶ ಹೊರಡಿಸಲಾಗಿತ್ತು. ಕೆಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳು ಎಸಗಿದ ಪ್ರಮಾದದಿಂದ ಸುಂಟಿಕೊಪ್ಪ, ನಾರ್ಗಾಣೆ ಸೇರಿದಂತೆ ಜಿಲ್ಲೆಯ ಹಲವು ಗ್ರಾಮಗಳು ಕಣ್ಮೆರೆಯಾಗಿರುವ ನಿದರ್ಶನಗಳು ದೊರೆತಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, 2 ನ್ಯಾಯಬೆಲೆ ಅಂಗಡಿ, ಅಂಚೆ ಕಚೇರಿಯು ಈ ಗ್ರಾಮದಲ್ಲಿ ಇವೆ. ಇಷ್ಟೆಲ್ಲಾ ಸರಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳು ಈ ಗ್ರಾಮವನ್ನು ಬಿಟ್ಟಿರುವುದೇ ಆಶ್ಚರ್ಯಕರ.
ನೂತನ ಪಂಚತಂತ್ರ ಅಳವಡಿಕೆ: ರಾಜ್ಯ ಸರಕಾರದ ಬೇಡಿಕೆ ಮೇರೆಗೆ ಮೋನಿಸ್ ಮೊದಿಲ್ ಎಂಬ ಅಧಿಕಾರಿ ತಮ್ಮ ನುರಿತ ಗಣಕ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗೆ 3 ಆ್ಯಪ್ ಅನ್ನು ತಯಾರಿಸಿ ಸರಕಾರಕ್ಕೆ ನೀಡಲಾಯಿತು. ದಿಶಾಂಕ್ ಆ್ಯಪ್ ಅನ್ನು 2 ವರ್ಷದ ಹಿಂದೆ ಆಡಳಿತ ನಡೆಸುತ್ತಿದ್ದ ಸರಕಾರ ಅನುಮೊದನೆ ನೀಡಿ ಅಂಗೀಕರಿಸಿತು. ಹಾಗೆಯೇ ಕಳೆದ ಒಂದುವರೆ ವರ್ಷದ ಹಿಂದೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ದಿಶಾಂಕ್ ಆ್ಯಪ್ ಪಂಚತಂತ್ರ ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ಇಲಾಖೆಯಿಂದ ಕಳುಹಿಸಿದ್ದು ಅದು ಕಾರ್ಯಾ ಚರಿಸುತ್ತಿದೆ. ಗ್ರಾಮ ಪಂಚಾಯಿತಿಯಿಂದ ಅಧಿಕೃತವಾಗಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಸುಲಲಿತವಾಗಿ ನಡೆಯಬೇಕಾದರೆ ಜಾಗದ ಭೂದಾಖಲೆ ಪಕ್ಕಾ ಆಗಿರಬೇಕಾಗಿದೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಅಧಿಕಾರಿ ಅಥವಾ ಸಿಬ್ಬಂದಿ ದಿಶಾಂಕ್ ಆ್ಯಪ್ ಆನ್ ಮಾಡಿದಾಗ ಸುಂಟಿಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಯಾವುದೇ ಜಾಗದಲ್ಲಿ ನಿಂತರೂ ಆ ಗ್ರಾಮದಲ್ಲಿರುವ ಜಾಗ ಅದರ ವಿಸ್ತೀರ್ಣ ಸರ್ವೆನಂಬರ್ ಯಾರಿಗೆ ಸೇರಿದೆ; ಸರಕಾರಿ ಜಾಗವೂ ಎಂದು ಸುಲಲಿತವಾಗಿ ಮಾಹಿತಿ ನೀಡುತ್ತದೆ. ಆದರೆ ದುರದೃಷ್ಟಾವಶಾತ್ ಸುಂಟಿಕೊಪ್ಪ ಪಟ್ಟಣ ಹಾಗೂ ನಾರ್ಗಣೆ ಗ್ರಾಮದ ಯಾವುದೇ ಜಾಗದ ಮಾಹಿತಿ ಈ ಆ್ಯಪ್‍ನಲ್ಲಿ ಲಭ್ಯವಿರುವುದಿಲ್ಲ ನಾರ್ಗಾಣೆ ಗ್ರಾಮ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚತಂತ್ರ ಮತ್ತು ಇ-ಸ್ವತ್ತು ಯೋಜನೆಯ ದಾಖಲೆಯಲ್ಲಿ ಕಾಣೆಯಾಗಿರುವ ಬಗ್ಗೆ 5 ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಬೆಳಕು ಚೆಲ್ಲಿದಾಗ ಜಿಲ್ಲಾಡಳಿತ ರಾಜ್ಯ ಕಂದಾಯ ಹಿರಿಯ ಅಧಿಕಾರಿಗಳು ನಾರ್ಗಾಣೆಯನ್ನು ಪಂಚತಂತ್ರ ಮತ್ತು ಇ-ಸ್ವತ್ತು ಯೋಜನೆಯ ದಾಖಲೆಯಲ್ಲಿ ಸೇರ್ಪಡೆಗೊಳಿಸಿತ್ತು.
- ಬಿ.ಡಿ. ರಾಜುರೈ