ಮಡಿಕೇರಿ, ಮಾ. 7: ಇತ್ತೀಚೆಗೆ ಸಂಪಾಜೆ ಲಯನ್ಸ್ ಕ್ಲಬ್ಬಿಗೆ ಜಿಲ್ಲಾ ರಾಜ್ಯಪಾಲ ರೊನಾಲ್ಡ್ ಗೋಮ್ಸ್ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಡೆಪಾಲ-ಕಲ್ಲುಗುಂಡಿಯಲ್ಲಿ ಬಸ್ಸು ತಂಗುದಾಣ ಮತ್ತು ಕಲ್ಲುಗುಂಡಿಯ ಸೆಂಟ್ರಲ್ ಸ್ಟೋರ್ ನ ಬಳಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಟಾಟಿಸಿದರು.
ಸಂಪಾಜೆ ಜ್ಯೂನಿಯರ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಸಂಪಾಜೆ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಕಿಶೋರ್ ಕುಮಾರ್ ಪಿಬಿ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ರಾಜ್ಯಪಾಲ ರೊನಾಲ್ಡ್ ಗೋಮ್ಸ್ ಮತ್ತು ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಅನಿತಾ ಗೋಮ್ಸ್ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ವಲಯಾಧ್ಯಕ್ಷ ರೇಣುಕಾ ಸದಾನಂದ ಜಾಕೆ, ಕ್ಲಬ್ಬಿನ ಕಾರ್ಯದರ್ಶಿ ಸಂಧ್ಯಾ ಸಚಿತ್ ರೈ, ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ವಿ ಬಾಲನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 20 ಸಾವಿರಕ್ಕಿಂತ ಅಧಿಕ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿರುವ ಮಡಿಕೇರಿಯ ಸ್ಮಿತಾ ಐ ಕೇರ್ ಕ್ಲಿನಿಕ್‍ನ ರೋಟೇರಿಯನ್ ಡಾ. ಪ್ರಶಾಂತ್ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಸುಳ್ಯ, ಗುತ್ತಿಗಾರು, ಪಂಜ, ಮಂಗಳೂರು, ವಿಟ್ಲ, ಸಕಲೇಶಪುರ ಮೊದಲಾದ ಕಡೆಗಳಿಂದ ಲಯನ್ಸ್ ಕ್ಲಬ್ಬಿನ ಪದಾಧಿಕಾರಿಗಳು ಮತ್ತು ಆಹ್ವಾನಿತರು ಆಗಮಿಸಿದರು. ಸಂಪಾಜೆ ಕ್ಲಬ್ಬಿನ ಹಿರಿಯ ಸದಸ್ಯರಾದ ದೇವಿಪ್ರಸಾದ್ ಸಂಪಾಜೆ ಹಾಗೂ ಚಿಕಾಗೋದಿಂದ ಸದಾನಂದ ನಾಯಕ್ ಮತ್ತು ಕ್ಲಬಿನ ಎಲ್ಲಾ ಸದಸ್ಯರು ಭಾಗವಹಿಸಿದ್ದರು.