ಗೋಣಿಕೊಪ್ಪ ವರದಿ, ಮಾ. 8: ಮಾಯಮುಡಿ ಗ್ರಾಮದ ಕಮಟೆ ಮಹಾದೇಶ್ವರ ದೇವರ ವಾರ್ಷಿಕ ಹಬ್ಬಕ್ಕೆ ಕೊಡಿಮರ ನಿಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಪೂಜಾ ವಿಧಿವಿಧಾನಗಳು ನಡೆಯಿತು. ಭಕ್ತರು ಚಪ್ಪರ, ಕೊಡಿಮರ ನಿಲ್ಲಿಸಿ ಭಕ್ತಿ ತೋರಿದರು.

ಕಂಗಳತ್ತ್‍ನಾಡ್‍ಗೆ ಸೇರುವ ಮಾಯಮುಡಿ, ಬಾಳಾಜಿ, ರುದ್ರಬೀಡು, ನೊಕ್ಯಾ, ದೇವರಪುರ, ಧನುಗಾಲ, ಹೆಬ್ಬಾಲೆ ಗ್ರಾಮಗಳ ಭಕ್ತರು ಪಾಲ್ಗೊಂಡು ಭಕ್ತಿಭಾವ ತೋರಿದರು.

5 ದಿನಗಳ ಆಚರಣೆಯಂತೆ ತಾ. 6 ರಂದು ಗಣಪತಿಗೆ ಪಂಚಕಜ್ಜಾಯ, ಈಶ್ವರನಿಗೆ ಬಿಲ್ವಪತ್ರಾರ್ಚನೆ ನಡೆಯಿತು.

ತಾ. 7 ರಂದು ಬೆ. 11.30 ಗಂಟೆಗೆ ಈಶ್ವರನಿಗೆ ಕ್ಷೀರಾಭಿಷೇಕ, ಮಾ. 8 ರಂದು ಬೆ. 11 ಗಂಟೆಗೆ ಸುಬ್ರಮಣ್ಯನಿಗೆ ಕ್ಷೀರಾಭಿಷೇಕ, ಈಶ್ವರನಿಗೆ ಅಲಂಕಾರ ಪೂಜೆ, ಸಾಯಂಕಾಲ 6 ಗಂಟೆಗೆ ನೆರಪು ನಡೆಯಲಿದೆ.

ತಾ. 9 ರಂದು ಸಾಯಂಕಾಲ 6 ಗಂಟೆಗೆ ದೇವರ ದರ್ಶನ, ಅಭ್ಯಂಜನ ಸ್ನಾನ, ದೇವರ ಉತ್ಸವಮೂರ್ತಿಯೊಂದಿಗೆ ನೃತ್ಯ, ವಸಂತಪೂಜೆ, ವಿಷ್ಣುಮೂರ್ತಿ, ಗುಳಿಗನಿಗೆ ಪೂಜೆ ನಡೆಯಲಿದೆ. ತಾ. 10 ರಂದು ಬೆ. 11 ಗಂಟೆಗೆ ಈಶ್ವರನಿಗೆ ರುದ್ರಾಭಿಷೇಕ, ನಾಗನಿಗೆ ಪೂಜೆ ನಡೆಯಲಿದೆ.