ಸುಂಟಿಕೊಪ್ಪ, ಮಾ. 6: ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಇತ್ತೀಚೆಗೆ ನಾಪೋಕ್ಲು ಶಾಲೆಗೆ ಭೇಟಿ ನೀಡಿದ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಇಲಾಖೆ ಸಚಿವ ಸುರೇಶ್‍ಕುಮಾರ್ ಅವರಿಗೆ ಸಮಸ್ಯೆ ಈಡೇರಿಕೆಗಾಗಿ ಮನವಿ ಸಲ್ಲಿಸಲಾಯಿತು.
1.08.2008ರ ನಂತರ ನೇರ ನೇಮಕಾತಿಯಡಿ ಆಯ್ಕೆಯಾದ ಪ್ರೌಢಶಾಲಾ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ 400ರೂ ವಿಶೇಷ ಭತ್ಯೆಯನ್ನು ಮಂಜೂರು ಮಾಡಿ 6ನೇ ವೇತನ ಆಯೋಗದ ಶಿಫಾಸ್ಸಿನನ್ವಯ 1-2018 ರಿಂದ 1 ವಿಶೇಷ ಭತ್ಯೆಯನ್ನು ಮಂಜೂರು ಮಾಡಬೇಕು.
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಜೂನ್ ತಿಂಗಳಿನಲ್ಲಿಯೇ ಆರಂಭಿಸಬೇಕು ವರ್ಗಾವಣೆ ಪ್ರಕ್ರಿಯೆಯಲ್ಲಿರುವ ನ್ಯೂನತೆ ಸರಿಪಡಿಸಬೇಕು. ಸರ್ಕಾರಿ ಅನುದಾನಿತ ಪ್ರೌಢಶಾಲಾ ತರಗತಿಗಳ ವಿದ್ಯಾರ್ಥಿ ಹಾಗೂ ಶಿಕ್ಷಕರ ಅನುಪಾತ 70:1 ರ ಬದಲಾಗಿ 50:1 ನಿಗದಿಪಡಿಸಬೇಕು 2006 ರ ನಂತರ ನೇಮಕಾತಿ ಹೊಂದಿದ ಶಿಕ್ಷಕರ ನೌಕರರ ಎನ್.ಪಿ.ಎಸ್. ಪದ್ಧತಿಯನ್ನು ರದ್ದುಪಡಿಸಿ (ಒಪಿಎಸ್) ಹಿಂದಿನ ಮಾದರಿಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. ಸೇರಿದಂತೆ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಲಾಯಿತು.