ಕರಡ, ಮಾ. 6: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ.ಕೆ. ಕುಸುಮಕುಮಾರಿ ಅವರು 17 ವರ್ಷಗಳ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿ ಹೊಂದಿದರು. ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದ ಸಹಯೋಗದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿ, ಕಿರುಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಟಿ.ಯು ಲತಾ, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೇಬಿ ಶಿವಪ್ಪ, ಸದಸ್ಯೆ ಐತಿಚಂಡ ವನಿತಾ ಪ್ರಕಾಶ್, ಮೇಲುಸ್ತುವಾರಿ ಸದಸ್ಯರು ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಐತಿಚಂಡ ಭೀಮಯ್ಯ, ಐತಿಚಂಡ ಸುಬ್ರಮಣಿ, ಬೇಪಡಿಯಂಡ ಬಿದ್ದಪ್ಪ, ತೆಕ್ಕಡಮ್ಮಂಡ ದೇವಯ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ನೆರಪಂಡ ಸುಷಾ ಮೊಣ್ಣಯ್ಯ, ಈಶ್ವರಿ, ಬಿ.ಆರ್.ಪಿ. ಮಂಜುಳಾ ಹಾಗೂ ಪೋಷಕರು ಹಾಜರಿದ್ದರು. ಶಾಲಾ ಮುಖ್ಯಶಿಕ್ಷಕಿ ಡಿ.ಕೆ. ಲೀಲಾವತಿ ಸ್ವಾಗತಿಸಿ, ಸಹಶಿಕ್ಷಕಿ ಬಿ.ಎ. ದಮಯಂತಿ ವಂದಿಸಿದರು.