ಮಡಿಕೇರಿ, ಮಾ. 6: ಮಡಿಕೇರಿ ಹಾಗೂ ಚೆಟ್ಟಳ್ಳಿ ನಡುವೆ ಲೋಕೋಪಯೋಗಿ ಇಲಾಖೆಯಿಂದ ರೂ. 6 ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ತಿ ಕೆಲಸ ನಡೆಯುತ್ತಿದ್ದು, ವಾಹನ ಚಾಲಕರು ಪರದಾಡುವಂತಾಗಿದೆ, ತಿರುವುಗಳಿಂದ ಕೂಡಿರುವ ಕಿರಿದಾದ ಮಾರ್ಗದಲ್ಲಿ ಒಂದೆಡೆ ಕಾವiಗಾರಿಯಿಂದ ವಾಹನಗಳಿಗೆ ತೊಡಕಾದರೆ, ಅಲ್ಲಲ್ಲಿ ದೂರವಾಣಿ ಕೇಬಲ್ ಅಳವಡಿಸಲು ಗುಂಡಿಗಳನ್ನು ನಿರ್ಮಿಸಿರುವುದು ಅಪಾಯ ಆಹ್ವಾನಿಸುವಂತಾಗಿದೆ. ಏಕಕಾಲಕ್ಕೆ ರಸ್ತೆ ಕಾಮಗಾರಿ ನಡುವೆ ಕೇಬಲ್ ಗುಂಡಿಗಳಿಂದಾಗಿ ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಚಾಲಕರು, ದ್ವಿಚಕ್ರ ವಾಹನಗಳ ಸವಾರರು ತೊಂದರೆ ಅನುಭವಿಸುವಂತಾಗಿದ್ದು, ಸಂಬಂಧಿಸಿದವರು ಅಗತ್ಯ ಕ್ರಮ ಕೈಗೊಳ್ಳುವಂತೆ ನಿತ್ಯ ಪ್ರಯಾಣಿಕರು ಹಾಗೂ ಚಾಲಕರು “ಶಕ್ತಿ”ಗೆ ನೀಡಿರುವ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.