ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಕೇಶವ ಪೆರಾಜೆ ಅವರು ದಿವಂಗತರಾಗಿ ಎರಡು ವರ್ಷವಾದ ಹಿನ್ನೆಲೆಯಲ್ಲಿ ಪೆರಾಜೆಯ ಪಯಸ್ವಿನಿ ಬಳಗದ ವತಿಯಿಂದ ಇಂದು ಬೆಳಿಗ್ಗೆ 7 ಗಂಟೆಗೆ ಪೆರಾಜೆಯಲ್ಲಿ ಸಾರ್ವಜನಿಕ ಪುರುಷರಿಗೆ ಗುಡ್ಡಗಾಡು ಓಟದ ಸ್ಪರ್ಧೆ ನಡೆಯಲಿದೆ. ಪ್ರಥಮ ರೂ 5 ಸಾವಿರ, ದ್ವೀತಿಯ ರೂ 3 ಸಾವಿರ, ತೃತೀಯ ರೂ 1 ಸಾವಿರ ಹಾಗೂ ನಂತರದ ಮೂರು ಸ್ಥಾನಗಳಿಗೆ ತಲಾ 500 ರಂತೆ ನೀಡಲಾಗುವುದು ಎಂದು ಪೆರಾಜೆ ಪಯಸ್ವಿನಿ ಬಳಗದ ಪ್ರಕಟಣೆ ತಿಳಿಸಿದೆ.
ಲ್ಯಾಪ್‍ಟಾಪ್ ವಿತರಣೆ
ಕಾಲೇಜು ಶಿಕ್ಷಣ ಇಲಾಖೆ, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಇಂದು ಬೆಳಗ್ಗೆ 10 ಗಂಟೆಗೆ ಕಾಲೇಜಿನ ವಾಣಿಜ್ಯ ವಿಭಾಗದ ಧ್ವನಿ-ದೃಶ್ಯ ಕೊಠಡಿಯಲ್ಲಿ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಶಾಸಕ ಕೆ.ಜಿ.ಬೋಪಯ್ಯ, ವೀರಾಜಪೇಟೆ ಸ.ಪ್ರ.ದ.ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ, ಪ್ರಾಂಶುಪಾಲ ಡಾ.ಟಿ.ಕೆ.ಬೋಪಯ್ಯ ಇತರರು ಪಾಲ್ಗೊಳ್ಳಲಿದ್ದಾರೆ.