ಗೋಣಿಕೊಪ್ಪ, ಮಾ. 3: ಮಾಯಮುಡಿ ಗ್ರಾಮದ ಕಮಟೆ ಮಹಾದೇಶ್ವರ ದೇವರ ವಾರ್ಷಿಕ ಹಬ್ಬ ತಾ. 5 ರಿಂದ 10 ರವರೆಗೆ ನಡೆಯಲಿದ್ದು, ತಾ. 9 ರಂದು ದೇವರ ದರ್ಶನದ ಮೂಲಕ ದೊಡ್ಡ ಹಬ್ಬ ನಡೆಯಲಿದೆ.

ಹಬ್ಬದ ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಅನ್ನದಾನ ನಡೆಯಲಿದೆ. ಗುಡಿಗಳಿಗೆ ಸಾಮೂಹಿಕ ಅಲಂಕಾರ, ಬೆಳಿಗ್ಗೆ 5.30 ಹಾಗೂ ರಾತ್ರಿ 7 ಗಂಟೆಗೆ ತೂಚಂಬಲಿ ಪೂಜಾ ಕಾರ್ಯ ನಡೆಯಲಿದೆ.

ಪೂಜಾ ವಿವರ: ತಾ. 5 ರಂದು ಸಂಜೆ 7 ಗಂಟೆಗೆ ಕೊಡಿಮರ ನಿಲ್ಲಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ತಾ. 6 ರಂದು ಬೆಳಿಗ್ಗೆ 11.30 ಗಂಟೆಗೆ ಗಣಪತಿಗೆ ಪಂಚಕಜ್ಜಾಯ, ಈಶ್ವರನಿಗೆ ಬಿಲ್ವಪತ್ರಾರ್ಚನೆ ನಡೆಯಲಿದೆ. ತಾ. 7 ರಂದು ಬೆಳಿಗ್ಗೆ 11.30 ಗಂಟೆಗೆ ಈಶ್ವರನಿಗೆ ಕ್ಷೀರಾಭಿಷೇಕ, ತಾ. 8 ರಂದು ಬೆಳಿಗ್ಗೆ 11 ಗಂಟೆಗೆ ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ, ಈಶ್ವರನಿಗೆ ಅಲಂಕಾರ ಪೂಜೆ, ಸಾಯಂಕಾಲ 6 ಗಂಟೆಗೆ ನೆರಪು ನಡೆಯಲಿದೆ. ತಾ. 9 ರಂದು ಸಾಯಂಕಾಲ 6 ಗಂಟೆಗೆ ದೇವರ ದರ್ಶನ, ಅಭ್ಯಂಜನ ಸ್ನಾನ, ದೇವರ ಉತ್ಸವಮೂರ್ತಿಯೊಂದಿಗೆ ನೃತ್ಯ, ವಸಂತಪೂಜೆ, ವಿಷ್ಣುಮೂರ್ತಿ, ಗುಳಿಗನಿಗೆ ಪೂಜೆ ನಡೆಯಲಿದೆ. ತಾ. 10 ರಂದು ಬೆಳಿಗ್ಗೆ 11 ಗಂಟೆಗೆ ಈಶ್ವರನಿಗೆ ರುದ್ರಾಭಿಷೇಕ, ನಾಗನಿಗೆ ಪೂಜೆ ನಡೆಯಲಿದೆ.

ಕಂಗಳತ್ತ್‍ನಾಡ್‍ಗೆ ಸೇರುವ ಮಾಯಮುಡಿ, ಬಾಳಾಜಿ, ರುದ್ರಬೀಡು, ನೊಕ್ಯಾ, ದೇವರಪುರ, ಧನುಗಾಲ, ಹೆಬ್ಬಾಲೆ ಗ್ರಾಮಗಳ ಭಕ್ತರ ಮುಂದಾಳತ್ವದಲ್ಲಿ ಹಬ್ಬ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಸಮಿತಿ ಪ್ರಕಟಣೆ ತಿಳಿಸಿದೆ.