ಮಡಿಕೇರಿ, ಮಾ. 3: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು “ಕೊಡಗಿನ ಶ್ರೀಮಂತ ಸಂಸ್ಕøತಿಯಲ್ಲಿ ಐನ್‍ಮನೆ” ಎಂಬ ವಿಷಯದ ಕುರಿತು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ತಾ. 21 ರಂದು ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಂಡಿದೆ.
ಆಸಕ್ತರು “ಕೊಡಗಿನ ಶ್ರೀಮಂತ ಸಂಸ್ಕøತಿಯಲ್ಲಿ ಐನ್‍ಮನೆ” ಎಂಬ ವಿಷಯದ ಕುರಿತು ಸಂಕ್ಷಿಪ್ತವಾಗಿ 200 ಅಕ್ಷರದ ಒಳಗೆ ಕೊಡವ, ಕನ್ನಡ, ಇಂಗ್ಲಿಷ್ ಈ 3 ಭಾಷೆಯಲ್ಲಿ ಯಾವುದಾದರು ಒಂದು ಭಾಷೆಯಲ್ಲಿ ಬರೆದು ತಾ. 10 ರೊಳಗೆ ಮತ್ತು ಪೂರ್ಣ ಪತ್ರಿಕೆಯನ್ನು ತಾ. 21 ರೊಳಗೆ ಅಕಾಡೆಮಿ ಕಚೇರಿಗೆ ಅಥವಾ ಇ-ಮೇಲ್ ಮುಖಾಂತರ ಚಿiಟಿmಚಿಟಿe2020@ gmಚಿiಟ.ಛಿom ಗೆ ಕಳುಹಿಸಿಕೊಡಲು ಕೋರಿದೆ. ಆಯ್ದ ಪತ್ರಿಕೆಗಳಿಗೆ ತಾ. 21 ರಂದು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ವಿಚಾರ ಮಂಡನೆ ಮಾಡಲು ಅವಕಾಶವಿದೆ ಹಾಗೂ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗೆ ದೂ. 9480440246, 9880216291ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.