ವೀರಾಜಪೇಟೆ, ಮಾ. 3: ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ ಮರೂರಿನ ಜೌಕಿಯ ಹರಿಜನ ಕಾಲೋನಿಯ ಕಾಂಕ್ರಿಟ್ ರಸ್ತೆಗೆ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು.
ಇದೇ ಸಂದರ್ಭ ಮಾತನಾಡಿದ ಬೋಪಯ್ಯ ಈ ವಿಭಾಗದಲ್ಲಿ ಹಾನಿಗೊಳಗಾದ ರಸ್ತೆಯನ್ನು ರೂ. 20 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯಾಗಿ ಮಾರ್ಪಡಿಸಲಾಗುವುದು. ಸುಮಾರು 470 ಮೀಟರ್ ಉದ್ದದ ಕಾಂಕ್ರಿಟ್ ರಸ್ತೆಯಿಂದ ಈ ವಿಭಾಗದ ಗ್ರಾಮಸ್ಥರಿಗೆ ಪ್ರÀಯೋಜನವಾಗಲಿದೆ ಎಂದರು. ಕಾಕೋಟುಪರಂಬು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಮುಕ್ಕಾಟಿರ ವಿನಿತಾ ಕಾವೇರಮ್ಮ, ಗ್ರಾಮದ ಪ್ರಮುಖರಾದ ಬಲ್ಲಚಂಡ ಮನು ಪೊನ್ನಣ್ಣ, ಕೆ. ಸುಬೀನ್, ಅಶ್ವಥ್, ಕಾಂಗೀರ ಸತೀಶ್, ಪರಮೇಶ್ವರ್, ಗುತ್ತಿಗೆದಾರ ನೀತು ಅಯ್ಯಪ್ಪ ಮತ್ತಿತರರು ಹಾಜರಿದ್ದರು.