ಕುಶಾಲನಗರ, ಮಾ. 3: ಅಂಗನವಾಡಿ ಸಹಾಯಕಿಯೊಬ್ಬರ ಅಸಮರ್ಪಕ ಕಾರ್ಯನಿರ್ವಹಣೆ ವಿರುದ್ಧವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿ; ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಸಹಾಯಕಿ ಯನ್ನು ಕೂಡಲೆ ಬೇರೆಡೆ ವರ್ಗಾಯಿಸಬೇಕೆಂದು ಒತ್ತಾಯಿಸಿ ಅಂಗನವಾಡಿಗೆ ಬೀಗ ಜಡಿದ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರದ ದಂಡಿನಪೇಟೆಯ ಶಾಂತಿಮಾರ್ಗದಲ್ಲಿರುವ ಅಂಗನವಾಡಿ ಕೇಂದ್ರದ ಸಹಾಯಕಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗು ವುದಿಲ್ಲ. ಕೇಂದ್ರಕ್ಕೆ ಆಗಮಿಸಿದರೂ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೆ ವಿದ್ಯಾರ್ಥಿ ಗಳನ್ನು ಎಲ್ಲೆಂದರಲ್ಲಿ ಅಡ್ಡಾಡಲು ಬಿಟ್ಟು ನಿರ್ಲಕ್ಷ್ಯ ತಾಳುತ್ತಾರೆ. ಅಂಗನವಾಡಿ ಕೇಂದ್ರ ಮತ್ತು ಅದರ ಆವರಣದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆಯ ಉತ್ತರ ನೀಡುತ್ತಾರೆ ಎಂದು ಪೋಷಕರು ಆರೋಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪಂಚಾಯ್ತಿ ಸದಸ್ಯೆ ಸುರಯ್ಯಭಾನು ಹಾಗೂ ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್, ಅಂಗನವಾಡಿ ಸಹಾಯಕಿ ಧೋರಣೆಯನ್ನು ವಿದ್ಯಾರ್ಥಿಗಳ ಪೋಷಕರು ಖಂಡಿಸಿದ್ದು ಕೂಡಲೆ ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಪಪಂ ಸದಸ್ಯರಾದ ವಿ.ಎಸ್.ಆನಂದಕುಮಾರ್, ಪೋಷಕರಾದ ಕಲೈಯರಸಿ, ಪುನಿತ್, ಸಾದಿಯಭಾನು, ನೂರ್ ಅಫ್ಸಾನ್, ರಂಶೀನ, ರೆಹಮತ್, ನೂರ್ಜಾನ್, ಸಾಜಿದ, ಮೈಮುನ, ಅಸ್ಮಾ, ಸರ್ಫುನಿಸಾ, ಕಮರುನ್ನೀಸಾ ಮತ್ತಿತರರು ಇದ್ದರು.