ಸುಂಟಿಕೊಪ್ಪ, ಮಾ. 3: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗದ್ದೆಹಳ್ಳ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಅಭಿಯಾನ ಸೀಮಂತ ಕಾರ್ಯಕ್ರಮ ಹಾಗೂ ವಿದ್ಯಾರಂಭವನ್ನು ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಉದ್ಘಾಟಿಸಿದರು.

ಸುಂಟಿಕೊಪ್ಪ ವರ್ತುಲದ ಅಂಗನವಾಡಿ ಕಾರ್ಯಕರ್ತೆ ಎಸ್.ಎನ್. ಸಾವಿತ್ರಿ ಮಾತೃಪೂರ್ಣ, ಮಾತೃವಂದನ, ಮಾತೃಶ್ರೀ ಯೋಜನೆಗಳ’ ಬಗ್ಗೆ ಮಾಹಿತಿ ನೀಡಿದರು. ಗರ್ಭಿಣಿ ಬಾಣಂತಿಯರು ಪೌಷ್ಟಿಕ ಆಹಾರದ ಬಗ್ಗೆ ಗ್ರಾ.ಪಂ. ಸದಸ್ಯೆ ನಾಗರತ್ನ ಮಾಹಿತಿ ನೀಡಿದರು.

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕಿ ಚಂದ್ರಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಸಂದರ್ಶಕ ಚಂದ್ರೇಶ್ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಮದ ಮಹಿಳೆಯರು, ಸುಂಟಿಕೊಪ್ಪ ಮುತ್ತಪ್ಪ ಕಾಲೋನಿ ಅಂಗನವಾಡಿ ಜೆಸ್ಸಿ ಡಿಸೋಜ, ಶ್ರೀದೇವಿ ಅಂಗನವಾಡಿ ಕಾರ್ಯಕರ್ತೆರಾದ ತಾಹಿರಾ ಕೆದಕಲ್, ಮಂಜುಳ ಪಂಪ್ ಹೌಸ್, ಸಲೀನಾ ಜೆಫ್ರಿ, ಲಕ್ಷ್ಮಿ, ಸಹಾಯಕಿ ಗ್ರೇಸಿ ಮತ್ತಿತರರು ಇದ್ದರು. ಸೆಲಿನಾ ಪ್ರಾರ್ಥಿಸಿ, ಲಕ್ಷ್ಮಿ ಸ್ವಾಗತಿಸಿ, ಜೆಸ್ಸಿ ಡಿಸೋಜ ನಿರೂಪಿಸಿದರು.