ಮಡಿಕೇರಿ, ಮಾ. 3: ಭಗಂಡೇಶ್ವರ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿಯು ಅಸ್ತಿತ್ವಕ್ಕೆ ಬಂದನಂತರ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ನಡೆಸಬೇಕಾದ ಅಭಿವೃದ್ಧಿ ಮತ್ತು ನಿರ್ವಹಣೆಯ ಕಾಮಗಾರಿಗಳ ಅನುಷ್ಠಾನದ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳ ನೇತೃತ್ವದಲ್ಲಿ ಜಂಟಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಆಡಳಿತಾವಧಿಯ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರ ಮತ್ತು ಭೂಸೇನೆಯ ಮೂಲಕ ಅನುಷ್ಠಾನ ಮಾಡಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಸದಸ್ಯರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು 2018 ರಲ್ಲಿ ತಲಕಾವೇರಿಯ ಆಶ್ರಮದ ಸಮೀಪ ಕಬ್ಬಿಣದ ಗೇಟ್ ಅನ್ನು ಅಳವಡಿಸಲಾಗಿದ್ದು ಈ ಕಾಮಗಾರಿಯನ್ನು ಬೆಂಗಳೂರಿನ ಉದ್ಯಮಿ ದಾನಿಗಳಾದ ಕೊಡಂದೇರ ಪೂವಯ್ಯ ನವರು ರೂಪಾಯಿ ಒಂದು ಲಕ್ಷದ ಐವತ್ತು ಸಾವಿರ ದಲ್ಲಿ ನಿರ್ಮಿಸಲು ಮುಂದಾಗಿದ್ದರು. ದಾನಿಗಳು ನೀಡಿದ ಹಣ ಕೊರತೆಯಾದ ಕಾರಣ ರೂ. 30 ಸಾವಿರವನ್ನು ಸಮಿತಿಯು ಪಾವತಿಸಿದೆ.

ಭಾಗಮಂಡಲ ಭಗಂಡೇಶ್ವರ ದೇವಾಲಯದ ಪೌಳಿಯಲ್ಲಿ ನೀರು ಸೋರುವ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯನವರು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಈ ಸಮಸ್ಯೆಯ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಕಾಮಗಾರಿಯ ಅವಶ್ಯಕತೆ ಕಂಡುಬಂದ ಕಾರಣ ಜಿಲ್ಲಾಧಿಕಾರಿಗಳ ಅನುಮೋದನೆಯೊಂದಿಗೆ ನಿರ್ಮಿತಿ ಕೇಂದ್ರದ ಮೂಲಕ ಈ ಕಾಮಗಾರಿ ಯನ್ನು ರೂಪಾಯಿ ನಲವತ್ತೆಂಟು ಲಕ್ಷ ವೆಚ್ಚದಲ್ಲಿ ನಡೆಯುತ್ತಿದೆ. ನಿರ್ಮಿತಿ ಕೇಂದ್ರವು ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ಇದೆ ರೀತಿ ಕಾಮಗಾರಿ ನಡೆಸಿ ಅನುಭವವಿರುವ ಮಂಗಳೂರಿನ ಗೋವರ್ಧನ ಮೆಟಲ್ಸ್ ಅವರ ಮೂಲಕ ಕಾಮಗಾರಿ ನಿರ್ವಹಿಸುತ್ತಿದೆ. ಭಾಗಮಂಡಲ ಸಂಗಮದ ಸಮೀಪ ರೂ. 55 ಲಕ್ಷ ವೆಚ್ಚದಲ್ಲಿ ಸಂಗಮ ಅಭಿವೃದ್ಧಿ ಮತ್ತು ಪಿಂಡ ಪ್ರದಾನ ಸ್ಥಳ ಮತ್ತು ಮುಡಿ ಶೆಡ್ ಕಾಮಗಾರಿಯನ್ನು ಸಹ ನಿರ್ಮಿತಿ ಕೇಂದ್ರದ ಮುಖಾಂತರ ಮಾಡಲಾ ಗುತ್ತಿದೆ. ಭಾಗಮಂಡಲ ದೇವಾಲಯ ಹಿಂಭಾಗ ಯಾತ್ರಿ ನಿವಾ¸ ನಿರ್ಮಿಸಲು 2012-13ರಲ್ಲಿ ಸರಕಾರ ಜಿಲ್ಲಾಧಿಕಾರಿಗಳಿಗೆ ರೂಪಾಯಿ 80 ಲಕ್ಷ ಅನುದಾನ ಮಂಜೂರಾಗಿತ್ತು. ಆದರೆ ಈ ಕಾಮಗಾರಿ ಅನುಷ್ಠಾನ ಗೊಂಡಿರಲಿಲ್ಲ. ಈ ಬಗ್ಗೆ ನಮ್ಮ ಸಮಿತಿಯಲ್ಲಿ ಚರ್ಚಿಸಿ ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ಕಾಮಗಾರಿಯನ್ನು ಭೂ ನಿಗಮ ಮಂಡಳಿಗೆ ವಹಿಸುವಂತೆ ತೀರ್ಮಾನಿ ಸಲಾಯಿತು. ಈ ಕಾಮಗಾರಿಯನ್ನು ಸಂಪೂರ್ಣ ಗೊಳಿಸಲು ಕೊರತೆ ಯಾದ ಹಣ 14 ಲಕ್ಷವನ್ನು ಸಮಿತಿ ಯಲ್ಲಿ ಚರ್ಚಿಸಿ ಜಿಲ್ಲಾಧಿಕಾರಿಗಳ ಅನುಮೋದನೆ ಯೊಂದಿಗೆ ಕಾನೂನು ಬದ್ಧವಾಗಿ ಭೂಸೇನಾ ನಿಗಮಕ್ಕೆ ನೀಡುವಂತೆ ತೀರ್ಮಾನಿಸಲಾಯಿತು.

ತಲಕಾವೇರಿ ತೀರ್ಥೋದ್ಭವ ನಿರ್ವಹಣೆ ಮತ್ತು ಇತರ ಕಾಮಗಾರಿಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ತೀರ್ಮಾನಿಸುವ ಪರಿಪಾಠವಿದೆ. ರೂಪಾಯಿ 80 ಲಕ್ಷ ಅನುದಾನ ಮಂಜೂರಾಗಿತ್ತು. ಆದರೆ ಈ ಕಾಮಗಾರಿ ಅನುಷ್ಠಾನ ಗೊಂಡಿರಲಿಲ್ಲ. ಈ ಬಗ್ಗೆ ನಮ್ಮ ಸಮಿತಿಯಲ್ಲಿ ಚರ್ಚಿಸಿ ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ಕಾಮಗಾರಿಯನ್ನು ಭೂ ನಿಗಮ ಮಂಡಳಿಗೆ ವಹಿಸುವಂತೆ ತೀರ್ಮಾನಿ ಸಲಾಯಿತು. ಈ ಕಾಮಗಾರಿಯನ್ನು ಸಂಪೂರ್ಣ ಗೊಳಿಸಲು ಕೊರತೆ ಯಾದ ಹಣ 14 ಲಕ್ಷವನ್ನು ಸಮಿತಿ ಯಲ್ಲಿ ಚರ್ಚಿಸಿ ಜಿಲ್ಲಾಧಿಕಾರಿಗಳ ಅನುಮೋದನೆ ಯೊಂದಿಗೆ ಕಾನೂನು ಬದ್ಧವಾಗಿ ಭೂಸೇನಾ ನಿಗಮಕ್ಕೆ ನೀಡುವಂತೆ ತೀರ್ಮಾನಿಸಲಾಯಿತು.

ತಲಕಾವೇರಿ ತೀರ್ಥೋದ್ಭವ ನಿರ್ವಹಣೆ ಮತ್ತು ಇತರ ಕಾಮಗಾರಿಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ತೀರ್ಮಾನಿಸುವ ಪರಿಪಾಠವಿದೆ. ಪ್ರಯತ್ನಿಸುತ್ತಿದೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಕೊಡಗಿನ ಭಕ್ತರೇ ಆಗಿದ್ದು, ಈ ಕ್ಷೇತ್ರದ ಪಾವಿತ್ರ್ಯ ಮತ್ತು ಪರಂಪರೆ ಸಂರಕ್ಷಣೆಯ ಬಗ್ಗೆ ಹಾಗೂ ಅಗತ್ಯವಿರುವ ಕಾಮಗಾರಿಯನ್ನು ಪಾರದರ್ಶಕತೆಯಿಂದ ನಿರ್ವಹಿಸಲು ಕಟಿಬದ್ಧರಾಗಿರುತ್ತಾರೆ.

ಆದರೆ ಕೆಲವು ವ್ಯಕ್ತಿಗಳು ಮತ್ತು ಕೆಲವು ಸಂಘಟನೆಯ ಪ್ರಮುಖರು ಮಾಹಿತಿ ಕೊರತೆಯಿಂದ ಅಥವಾ ಕ್ಷೇತ್ರದ ಅಭಿವೃದ್ಧಿಗಳನ್ನು ಸಹಿಸದೆ ಮೂಗರ್ಜಿಗಳನ್ನು ಮುಖ್ಯ ಮಂತ್ರಿಗಳಿಗೆ, ಶಾಸಕರಿಗೆ, ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಮತ್ತು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ, ಸಾಮಾಜಿಕ ಜಾಲತಾಣದಲ್ಲಿ ತಪ್ಪು ಪ್ರಚಾರ ಮಾಡುತ್ತಿರುವುದು ಕ್ಷೇತ್ರದ ದುರದೃಷ್ಟವೇ ಸರಿ. ಇದರಿಂದ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಬರುತಿದ್ದು, ದೇವಸ್ಥಾನದ ಆಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಜುಗರ ಉಂಟುಮಾಡುತ್ತಿದೆ.

ಭಗಂಡೇಶ್ವರ - ತಲಕಾವೇರಿ ಕ್ಷೇತ್ರದಲ್ಲಿ ಕಳೆದ ಹದಿನೈದು ವರ್ಷದಿಂದ ಈಚೆಗೆ ಅನುಷ್ಠಾನ ಗೊಂಡ ಜಾತ್ರೆ ಮತ್ತು ಕಾಮಗಾರಿಗಳಲ್ಲಿ ಪಾರದರ್ಶಕತೆ ಮತ್ತು ಗುಣ ಮಟ್ಟದ ಬಗ್ಗೆ ಯಾರಿಗಾದರೂ ಸಂಶಯ ವಿದ್ದಲ್ಲಿ, ಕರ್ನಾಟಕ ಲೋಕಾಯುಕ್ತ ಅಥವಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡುವಂತೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ರೀತಿಯ ಸ್ವತಂತ್ರ ತನಿಖೆ ನಡೆದಲ್ಲಿ ಅದಕ್ಕೆ ಸಂಪೂರ್ಣ ನೆರವು ನೀಡಲು ಸಮಿತಿಯ ಸದಸ್ಯರೆಲ್ಲರೂ ಸಿದ್ಧರಿರುವುದಾಗಿ ಹೇಳಿದ್ದಾರೆ.