ಮಡಿಕೇರಿ, ಮಾ.1: 2020ರ ಏಪ್ರಿಲ್ 1 ರಿಂದ ಬಿಎಸ್-6 ವಾಹನಗಳನ್ನು ಮಾತ್ರ ನೋಂದಣಿ ಮಾಡಬೇಕಾಗಿರುವುದರಿಂದ, ಬಿಎಸ್-6 ಮಾದರಿಯಲ್ಲಿ ತಯಾರಾದ ವಾಹನಗಳನ್ನು ಹೊರತುಪಡಿಸಿ ಇತರೆ ಮಾದರಿಯ ವಾಹನವನ್ನು 2020ರ ಮಾರ್ಚ್, 31 ರ ಒಳಗೆ ನೋಂದಣಿ ಮಾಡಿಸಿಕೊಳ್ಳುವಂತೆ ವಾಹನ ಖರೀದಿದಾರರಿಗೆ ಮತ್ತು ಮಾರಾಟಗಾರರಿಗೆ ತಿಳಿಸಿದೆ. ಒಂದು ವೇಳೆ ಅವಧಿ ಮೀರಿ ಬಂದಂತಹ ಅರ್ಜಿಗಳನ್ನು ಪರಿಗಣಿಸಲು ಅವಕಾಶವಿರುವುದಿಲ್ಲ. ಇದಕ್ಕೆ ವಾಹನ ಖರೀದಿದಾರರು ಮತ್ತು ಮಾರಾಟಗಾರರೇ ನೇರ ಹೊಣೆಗಾರರಾಗಿದ್ದಾರೆ. ಹಾಗೂ ಬಿಎಸ್-6 ಹೊರತುಪಡಿಸಿ ಇತರೆ ಮಾದರಿಯ ಎಲ್ಲಾ ವರ್ಗದ ವಾಹನಗಳನ್ನು 2020ರ ತಾ. 31 ರೊಳಗೆ ನೋಂದಾಯಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ ತಿಳಿಸಿದ್ದಾರೆ.