ಶ್ರೀಮಂಗಲ, ಮಾ. 1: ಟಿ.ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಹರಿಹರ ಗ್ರಾಮದಲ್ಲಿ ರೈತ ಸಾಕಿದ್ದ ಹಂದಿ ಮೇಲೆ ಹುಲಿ ದಾಳಿ ಮಾಡಿದ್ದು,ಹಂದಿ ಬಲಿಯಾಗಿದೆ. ಹರಿಹರ ಗ್ರಾಮದ ತೀತೀರ ಸಿ. ಅಪ್ಪಯ್ಯ ಅವರಿಗೆ ಸೇರಿದ 40 ಕೆ.ಜಿ.ಯ ಹಂದಿಯನ್ನು ಗೂಡಿಗೆ ನುಗ್ಗಿ ಹುಲಿ ಕೊಂದು ಹಾಕಿದೆ.