ಚೆಟ್ಟಳ್ಳಿ, ಮಾ. 1: ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವವು ಶ್ರದ್ಧಾ ಭಕ್ತಿಯಿಂದ ನಡೆಯಿತು.
ಭಾನುವಾರ ಚೇರಳ ಶ್ರೀ ಭಗವತಿ ದೇವಿಯ ದೊಡ್ಡ ಹಬ್ಬವಾಗಿದ್ದು; ಭಗವತಿ ದೇವಿಗೆ ಹೂವು, ವಸ್ತ್ರಾಭರಣದೊಂದಿಗೆ ಅಲಂಕರಿಸಲಾಗಿತ್ತು. ಬಿಳಿ ಕುಪ್ಪಸ ದಟ್ಟಿಯನ್ನು ತೊಟ್ಟ ಊರಿನವರೆಲ್ಲ ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರಮನೆಯಾದ ಚೇರಳ ತಮ್ಮಂಡ ಆನಂದ ಅವರ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ತಂದು ದೇವತಕ್ಕರಾದ ಚೇರಳ ತಮ್ಮಂಡ ಆನಂದ ಹಾಗೂ ತಕ್ಕರಾದ ಕೊಂಗೇಟಿರ ಹರೀಶ್ ಅಪ್ಪಣ್ಣನವರ ಸಮ್ಮುಖದಲ್ಲಿ ದೇವಾಲಯದ ವಾರ್ಷಿಕೋತ್ಸವದ ವಿಧಿüವಿಧಾನಗಳು ಸಂಪ್ರದಾಯ ಬದ್ಧವಾಗಿ ನಡೆಯಿತು. ತೆಂಗಿನಕಾಯಿ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಊರಿನವರೆಲ್ಲ ಸೇರಿ ದೇವರ ನೆಡೆಗೆ ಬಂದು ದೇವಾಲಯದಲ್ಲಿ ಇಟ್ಟಂತ ಕೊಂಬನ್ನು ಹಿಡಿದು ಬೊಳಕ್ ಮರದ ಮುಂದೆ ಸಾಲಾಗಿ ವಿಶೇಷಕರವಾದ ಕೊಂಬಾಟ್ ನೃತ್ಯ ಮಾಡಿದರು. ದೇವರ ಭಂಡಾರವನ್ನು ದುಡಿಕೊಟ್ಟ್ ಹಾಡು ಒಡ್ಡೋಲಗದೊಂದಿಗೆ ದೇವ ತಕ್ಕರಾದ ಚೇರಳತಮ್ಮಂಡ ಆನಂದ ಅವರ ಮನೆಗೆ ತೆರಳಿ ಇಡಲಾಯಿತು.