ಸೋಮವಾರಪೇಟೆ, ಫೆ. 28: ಸಮೀಪದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಮಾತೃಭಾಷಾ ದಿವಸ್’ ಆಚರಣೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರ ಮಾತನಾಡಿ, ಭಾಷೆ ಯೆಂಬದು ಮನುಷ್ಯ ಜೀವ ನದ ಒಂದು ಪ್ರಮುಖ ಅನ್ವೇಷಣೆ. ಮನುಷ್ಯ-ಮನುಷ್ಯನ ಮಧ್ಯೆ ಸಂವಹನ ಸಾಧ್ಯವಾಗಿರುವದು ಭಾಷೆಯ ಮೂಲಕವೇ. ಭಾಷೆಯಿಲ್ಲದ ಜೀವನ ಕಲ್ಪಿಸಿಕೊಳ್ಳವದಕ್ಕೂ ಸಾಧ್ಯವಿಲ್ಲ. ಎಲ್ಲ ಭಾಷೆಗಳನ್ನು ಗೌರವಿಸಿ ಆದರೆ, ಮಾತೃಭಾಷೆಯನ್ನು ಪ್ರೀತಿಸಿ ಪೋಷಿಸಿ ಎಂದು ಕಿವಿಮಾತು ಹೇಳಿದರು. ಕಾಲೇಜಿನ ಕನ್ನಡ ಉಪನ್ಯಾಸಕ ಕೆ. ಪಾಪಣ್ಣ ಮಾತನಾಡಿ, ಪ್ರಸ್ತುತ ಜಾಗತೀಕರಣದ ಸಂದರ್ಭ ಕನ್ನಡ ಭಾಷೆಗೆ ಒದಗಿಬಂದಿರುವ ದುಸ್ಥಿತಿಯ ಕುರಿತು ವಿಷಾದ ವ್ಯಕ್ತಪಡಿಸಿದರು. ಇಂಗ್ಲಿಷ್ ಭಾಷೆಯು ಮುಖ್ಯವಾದರೂ ಸಹ ಭಾವನೆಗಳನ್ನು ವ್ಯಕ್ತಪಡಿಸುವದಕ್ಕೆ ಮತ್ತು ಬದುಕಿರುವ ನೆಲದ ಸಂಸ್ಕøತಿಯನ್ನು ಕಾಪಾಡಿಕೊಳ್ಳುವದಕ್ಕೆ ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು. ಇದೇ ಸಂದರ್ಭ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ‘ಮಾತೃ ಭಾಷೆಯ ಮೂಲಕವೇ ಶಿಕ್ಷಣ-ಉನ್ನತ ಜೀವನಕ್ಕೆ ಸೋಪಾನ’ ಕುರಿತು ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕಿ ದಮಯಂತಿ, ಶಿವಮೂರ್ತಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.