ಕರಿಕೆ, ಫೆ. 29: ಇಲ್ಲಿಗೆ ಸಮೀಪದ ಪ್ರಸಿದ್ಧ ದೈವಿಕ ಸ್ಥಾನವಾದ ಮಙನಡ್ಕ ತುಳೂರು ವನದ ಭಗವತಿ ಕ್ಷೇತ್ರದ ದೇವರ ವಾರ್ಷಿಕ ಜಾತ್ರ್ರಾ ಮಹೋತ್ಸವ ಅದ್ಧೂರಿಯಿಂದ ನಡೆಯುತ್ತಿದೆ. ಶಿವರಾತ್ರಿಯ ಮಾರನೇ ದಿನ ಆರಂಭಗೊಂಡು ಒಟ್ಟು ಎಂಟು ದಿನಗಳ ಕಾಲ ನಡೆಯುವ ಈ ಜಾತ್ರ್ರಾ ಮಹೋತ್ಸವದ ಏಳನೆ ದಿನ ಕ್ಷೇತ್ರದ ಕಾರಣಿಕದ ದೈವ ಶ್ರೀ ಮುನ್ನಾಯರ್ ದೇವರ ಮುಡಿ ಇಂದು ನಡೆಯಿತು. ಕೇರಳ ಹಾಗೂ ಸುಳ್ಯ, ಕೊಡಗಿನ ಕರಿಕೆ ಭಾಗದ ನೂರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯದ ಆಡಳಿತ ಮನೆತನದ ಪ್ರಮುಖರಾದ ಕಾಟೂರು ವಿದ್ಯಾಧರ್, ತಂಬಾನ್, ಮಧುಸೂಧನ್ ಸೇರಿದಂತೆ ಅನೇಕ ಪ್ರಮುಖರು, ಭಕ್ತರು ಪಾಲ್ಗೊಂಡಿದ್ದರು.