ವೀರಾಜಪೇಟೆ, ಫೆ. 28: ವೀರಾಜಪೇಟೆ ಪಟ್ಟಣ ಪಂಚಾಯಿತಿಯ 2020-21 ನೇ ಸಾಲಿನ ಬಜೆಟ್ನ ಪ್ರಯುಕ್ತ ಪಂಚಾಯಿತಿಯ ಸಭಾಂಗಣದಲ್ಲಿ ಸದಸ್ಯರುಗಳ ಸಮ್ಮುಖದಲ್ಲಿ ಇಂದು ಪೂರ್ವಭಾವಿ ಸಭೆ ನಡೆದುಪಟ್ಟಣದ ಸ್ವಚ್ಛತೆ, ಕುಡಿಯುವ ನೀರಿನ ಪೊರೈಕೆ, ವಿವಿಧ ವಾರ್ಡ್ಗಳಲ್ಲಿ ಅಗತ್ಯ ಜನಪರ ಕಾಮಗಾರಿ, ರಸ್ತೆ, ಚರಂಡಿ ದುರಸ್ತಿ, ಬೀದಿ ದೀಪಗಳ ದುರಸ್ತಿಗೆ ಆದ್ಯತೆ ನೀಡಲು ಸದಸ್ಯರುಗಳು ಸಲಹೆ ನೀಡಿದರು. ವೀರಾಜಪೇಟೆ ತಾಲೂಕು ತಹಶೀಲ್ದಾರ್ ಆಗಿ ಇಂದು ಅಧಿಕಾರ ವಹಿಸಿಕೊಂಡ ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿ ನಂದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೂರ್ಣ ಬಜೆಟ್ ಸಿದ್ಧತೆಗೆ ಮೊದಲು ಸದಸ್ಯರುಗಳು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದು ಪರಿಶೀಲಿಸಿ ಅಗತ್ಯ ಪರಿವರ್ತನೆಯೊಂದಿಗೆ ಅಂತಿಮ ಬಜೆಟ್ ಸಿದ್ಧಪಡಿಸಿ ಮುಂದಿನ ಬಜೆಟ್ ಸಭೆಯಲ್ಲಿ ಮಂಡಿಸಲಾಗುವುದು ಎಂದು ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಅವರು ಸದಸ್ಯರುಗಳಿಗೆ ಸಭೆಯಲ್ಲಿ ತಿಳಿಸಿದರು.ಪಂಚಾಯಿತಿ ಸದಸ್ಯೆ ಎಂ.ಕೆ.ದೇಚಮ್ಮ ಮಾತನಾಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಶೌಚಾ¯ಯಗಳ ನಿರ್ವಹಣೆಗಾಗಿ ಬಜೆಟ್ನಲ್ಲಿ ತೋರಿಸಿರುವಂತೆ ರೂ 50,000 ಏನೇನು ಸಾಲದು. ಕನಿಷ್ಟ ರೂ. ಐದು ಲಕ್ಷಕ್ಕೂ ಅಧಿಕ ಹಣವನ್ನು ಬಜೆಟ್ನಲ್ಲಿ ಮೀಸಲಿರಿಸಬೇಕು. ಜೊತೆಗೆ ಪ್ರಕೃತಿ ವಿಕೋಪ ಹಾಗೂ ಇತರ ದುರಂತಕ್ಕೀಡಾದವರಿಗೆ ತುರ್ತು ಪರಿಹಾರವಾಗಿ ನೀಡಲು ಬಜೆಟ್ನಲ್ಲಿ ಅಧಿಕ ಹಣವನ್ನು ಮೀಸಲಿಡುವಂತೆ ಸಲಹೆ ನೀಡಿದನ್ನು ಸಭೆ ಅಂಗೀಕರಿಸಿತು.ಸದಸ್ಯ ರಾಜೇಶ್ ಪದ್ಮನಾಭ ಮಾತನಾಡಿ ಮಲಬಾರ್ ರಸ್ತೆಯಲ್ಲಿರುವ ಹಿಂದು ರುದ್ರಭೂಮಿಯನ್ನು ರಕ್ಷಿಸಿ ಅಭಿವೃದ್ಧಿ ಪಡಿಸಬೇಕು. ಅಲ್ಲಿ ಶುಚಿತ್ವ ಕಾಪಾಡಬೇಕು. ಇದನ್ನು ಖಾಯಂ ನಿರ್ವಹಣೆ ಮಾಡಲು ಯೋಜನೆಯೊಂದನ್ನು ರೂಪಿಸಿ ಬಜೆಟ್ನಲ್ಲಿ ಪ್ರತ್ಯೇಕ ಹಣವಿಡಬೇಕು ಎಂದು ತಿಳಿಸಿದರು.
ಸದಸ್ಯರಾದ ಎಸ್.ಎಚ್.ಮತೀನ್ ಮಾತನಾಡಿ ಪಟ್ಟಣ ಪಂಚಾಯಿತಿಗೆ ಸೇರಿದ ಎಲ್ಲ ಮಳಿಗೆಗಳನ್ನು ಕಾನೂನು ಬದ್ಧವಾಗಿ ಬಿಡ್ದಾರರಿಗೆ ನೀಡಬೇಕು. ಉಳಿದ ಮಳಿಗೆಗಳನ್ನು ಹರಾಜು ಮಾಡಿ ಪಟ್ಟಣ ಪಂಚಾಯಿತಿ ಸಂಪತ್ತನ್ನು ಇನ್ನಷ್ಟು ಕ್ರೋಢಿಕರಿಸುವಂತೆ ಸಲಹೆ ನೀಡಿದರು. ಸದಸ್ಯ ಸಿ.ಕೆ.ಪೃಥ್ವಿನಾಥ್ ಅವರು ಮಾತನಾಡಿ ಖಾಸಗಿ ಬಸ್ಸು ನಿಲ್ದಾಣದ ಬಳಿಯಿರುವ ಗೌರಿಕೆರೆ ಮಲೀನವಾಗಿದ್ದು ಇದನ್ನು ತಕ್ಷಣ ಶುಚಿಗೊಳಿಸಬೇಕು. ಈ ಪವಿತ್ರವಾದ ಗೌರಿ ಕೆರೆಯನ್ನು ಎಲ್ಲ ರೀತಿಯಿಂದಲೂ ಅಭಿವೃದ್ಧಿ ಪಡಿಸಬೇಕು. ಇದರ ನಿರ್ವಹಣೆಗಾಗಿ ಬಜೆಟ್ನಲಿ ್ಲಪ್ರತ್ಯೇಕ ಹಣವಿರಿಸಬೇಕು.
(ಮೊದಲ ಪುಟದಿಂದ) ಪಟ್ಟಣ ಪಂಚಾಯಿತಿ, ಪ್ರತಿ ದಿನ ವಾಹನಗಳಿಗೆ ತುಂಬುವ ಡೀಸೆಲ್ನಲ್ಲಿ ಅವ್ಯವಹಾರ ನಡೆಯುತ್ತಿದೆ. ಇದರ ಜೊತೆಯಲ್ಲಿ ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸುವ ಯಂತ್ರದ ಬಾಡಿಗೆ ವ್ಯವಹಾರದಲ್ಲಿಯೂ ದುರುಪಯೋಗ ಪ್ರಕರಣಗಳು ನಡೆಯುತ್ತಿದೆ. ಅಧಿಕಾರಿಗಳು ಇದರ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಪಟ್ಟಣ ಪಂಚಾಯಿತಿಯ ಆದಾಯ ಇದರಿಂದ ಸೋರಿಕೆಯಾಗುತ್ತಿದ್ದು ಇದರ ಬಗ್ಗೆ ಲೋಕಾಯುಕ್ತದಿಂದಲೂ ಉನ್ನತ ಮಟ್ಟದ ತನಿಖೆಯಾದರೆ ಪಟ್ಟಣ ಪಂಚಾಯಿತಿಯಲ್ಲಿ 2019-20ರಲ್ಲಿ ದುರುಪಯೋಗಗೊಂಡ ಹಣವನ್ನು ಪತ್ತೆ ಹಚ್ಚಬಹುದೆಂದೂ ಆಕ್ರೋಶದಿಂದ ನುಡಿದರು.
ಸದಸ್ಯೆ ಆಶಾ ಸುಬ್ಬಯ್ಯ ಮಾತನಾಡಿ ಬೀದಿ ನಾಯಿಗಳು ಹಾಗೂ ಬೀಡಾಡಿ ದನಗಳನ್ನು ನಿಯಂತ್ರಿಸಲು ಪಟ್ಟಣ ಪಂಚಾಯಿತಿ ಯೋಜನೆಯನ್ನು ರೂಪಿಸಲು ಬಜೆಟ್ನಲ್ಲಿ ಸೇರಿಸಬೇಕು. ಸುನೀತಾ ಜೂನಾ ಮಾತನಾಡಿ ಈಚೆಗೆ ಶಿವಕೇರಿ, ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿ ಸುಮಾರು ಎಂಟು ಮಂದಿಗೆ ಹುಚ್ಚು ನಾಯಿ ಕಡಿದು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಎದುರಾಯಿತು. ಇಂತಹ ನಾಯಿಗಳನ್ನು ಪಟ್ಟಣ ಪಂಚಾಯಿತಿ ನಿಯಂತ್ರಿಸುವ ಕೆಲಸವಾಗಬೇಕಾಗಿದೆ ಎಂದರು.
ಬಜೆಟ್ನ ಪೂರ್ವಭಾವಿ ಸಭೆಯಲ್ಲಿ 2020-21ನೇ ಸಾಲಿಗೆ ಒಟ್ಟು ರೂ ಹದಿನೇಳು ಕೋಟಿಯ ಎಪ್ಪತ್ತೊಂದು ಲಕ್ಷ ಮೊತ್ತದ ಬಜೆಟ್ ಸಿದ್ಧಪಡಿಸಲಾಗಿದ್ದು ಇದರಲ್ಲಿ ರೂ ನಲ್ವತ್ತೆಂಟು ಲಕ್ಷ ಉಳಿತಾಯ ಬಜೆಟ್ ಎಂದು ತೋರಿಸಲಾಗಿದೆ. ಈಗ ಸದಸ್ಯರುಗಳ ಸಲಹೆ ಸೂಚನೆ ಮೇರೆಗೆ ಬಜೆಟ್ನಲ್ಲಿ ಅಗತ್ಯವಾದ ಕೆಲವನ್ನು ಕಾನೂನಾತ್ಮಕವಾಗಿ ಬದಲಾವಣೆ ಮಾಡಲಾಗುವುದು. ಬಜೆಟ್ ಸಭೆ ಮುಂದಿನ ತಿಂಗಳು ಎಲ್ಲ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಜೆಟ್ ಮಂಡನೆ ಮಾಡಲಾಗುವುದು ಎಂದು .ಶ್ರೀಧರ್ ಸಭೆಗೆ ತಿಳಿಸಿದರು.
ಪೂರ್ವಭಾವಿ ಬಜೆಟ್ ಸಭೆಯಲ್ಲಿ ಜಲೀಲ್, ಕೆ.ಬಿ.ಹರ್ಷವರ್ಧನ್, ಆಗಸ್ಟಿನ್, ವಿ.ಆರ್.ರಜನಿಕಾಂತ್, ಮಹದೇವ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಹದಿನೆಂಟು ಸದಸ್ಯರುಗಳ ಪೈಕಿ 16ಮಂದಿ ಹಾಜರಾಗಿದ್ದರು. ಪಟ್ಟಣ ಪಂಚಾಯಿತಿ ಅಭಿಯಂತರ ಎನ್.ಪಿ,ಹೇಮ್ಕುಮಾರ್, ರೆವಿನ್ಯೂ ಇನ್ಸ್ಪೆಕ್ಟರ್ ಸೋಮೇಶ್ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.