ಮಡಿಕೇರಿ, ಫೆ. 29: ಸರ್ಕಾರ ಒದಗಿಸುವ ವಿವಿಧ ಜನಪರ ಸೌಲಭ್ಯಗಳಿಗೆ ಆಧಾರ್ ಜೋಡಣೆಯಿಂದ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯದ ವಿತರಣೆ ಹಾಗೂ ಪಾರದರ್ಶಕತೆ ಸಾಧ್ಯವಾಗುತ್ತಿದೆ.

ಕೇಂದ್ರ ಸರ್ಕಾರದ ಮಹತ್ವಾಂಕಾಕ್ಷಿ ಆಧಾರ್ ಎಲ್ಲಾ ಕೆಲಸಗಳಿಗೆ ಕಡ್ಡಾಯವಾಗಿರುವ ಸಂದರ್ಭದಲ್ಲಿಯೇ ಸಾರ್ವಜನಿಕರಿಗೆ ಹಾಗೂ ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲತೆಗಾಗಿ ಆಧಾರ್ ನೋಂದಣಿ ಕೇಂದ್ರವನ್ನು ಕಾಪೆರ್Çರೇಶನ್ ಬ್ಯಾಂಕಿನ ನಗರದ ಶಾಖೆಯಲ್ಲಿ ತೆರೆದಿದ್ದು, ಅವುಗಳ ಸದುಪಯೋಗಪಡೆದುಕೊಳ್ಳಬೇಕು ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ಪ್ರಬಂಧಕರಾದ ಆರ್.ಕೆ.ಬಾಲಚಂದ್ರ ಅವರು ತಿಳಿಸಿದ್ದಾರೆ. ಆಧಾರ್ ನೋಂದಣಿಗೆ ಬರುವವರು ಕಡ್ಡಾಯವಾಗಿ ಮೂಲ ದಾಖಲಾತಿಯನ್ನು ತರಬೇಕು. ಗುರುತಿನ ಖಾತ್ರಿಗೆ, ವಿಳಾಸದ ಖಾತ್ರಿಗೆ, ವಯಸ್ಸಿಗೆ ಸಂಬಂಧಿಸಿದಂತೆ ಯಾವುದಾದರೊಂದು ಮಾಹಿತಿಯನ್ನು, ದಾಖಲೆಯನ್ನು ಪೂರೈಸಿ ಬ್ಯಾಂಕಿನಲ್ಲಿ ತೆರೆದ ಆಧಾರ್ ಸೇವಾ ಕೇಂದ್ರದಲ್ಲಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬಹುದು. ಇದರ ಜೊತೆಗೆ ಹೊಸ ಆಧಾರ ಕಾರ್ಡು ಹಾಗೂ ಹಳೆಯ ಆಧಾರ್ ಕಾರ್ಡ್‍ಗೂ ತಿದ್ದುಪಡಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ.

ಗುರುತಿನ ಖಾತ್ರಿಗೆ ದಾಖಲೆ: ಪಾಸ್‍ಪೆÇೀರ್ಟ್, ಪಾನ್‍ಕಾರ್ಡ್, ರೇಶನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ನರೇಗಾ ಕಾರ್ಡ್, ವಿಶ್ವವಿದ್ಯಾಲಯದ ಗುರುತಿನ ಕಾರ್ಡ್, ಆಯುಧ ಲೈಸೆನ್ಸ್ ಪೆÇೀಟೊ ಸಹಿತ ಬ್ಯಾಂಕ್ ಎಟಿಎಂ, ಪಾಸ್‍ಬುಕ್, ಪೋಟೊ ಕ್ರೆಡಿಟ್ ಕಾರ್ಡು, ಪೆನ್ಷನ್ ಕಾರ್ಡು, ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ, ಕಿಸಾನ ಪೆÇೀಟೊ ಪಾಸ್‍ಬುಕ್, ಇಲಾಖೆಯಿಂದ ವಿತರಿಸಲಾದ ಗುರುತಿನ ಚೀಟಿ,

ವಿಳಾಸದ ಖಾತ್ರಿಗೆ ದಾಖಲೆ: ಪಾಸ್‍ಪೋರ್ಟ್, ಬ್ಯಾಂಕ್ ಪಾಸ್ ಬುಕ್, ಪೆÇೀಸ್ಟ್ ಆಫೀಸ್ ಪಾಸ್ ಬುಕ್, ರೇಶನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ವಿದ್ಯುತ್ ಬಿಲ್, ಗ್ರೂಪ್ ಪೆÇೀಟೊ ಗುರುತಿನ ಚೀಟಿ, ಇನ್ಸೂರೆನ್ಸ್ ಪಾಲಿಸಿ, ನರೇಗಾ ಕಾರ್ಡ್, ಆಯುಧ ಲೈಸನ್ಸ್ ಪೆನ್ಸನ್ ಕಾರ್ಡು, ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ, ಕಿಸಾನ ಪೆÇೀಟೊ ಪಾಸ್‍ಬುಕ್, ಎಂಎಲ್‍ಎ, ಎಂ.ಪಿ, ಪೆÇೀಟೊ ಗುರುತಿನ ಚೀಟಿ, ವಾಹನ ನೋಂದಣಿ ಪತ್ರ, ಅಡುಗೆ ಅನಿಲ ಸಂಪರ್ಕ ಪತ್ರ.

ವಯಸ್ಸಿನ ಖಾತ್ರಿಗೆ ದಾಖಲೆ: ಜನನ ಪ್ರಮಾಣ ಪತ್ರ, ಎಸ್ಸಸ್ಸೆಲ್ಸಿ ಮಾಕ್ರ್ಸ್ ಕಾರ್ಡು, ವರ್ಗಾವಣೆ ಪ್ರಮಾಣ ಪತ್ರ, ಪಾಸ್ ಪುಸ್ತಕ, ಪೆÇೀಟೊ ಗುರುತಿನ ಚೀಟಿ, ಸ್ವಯಂ ಘೋಷಣೆಯ ಪ್ರಮಾಣ ಪತ್ರ, ಜನ್ಮ ದಿನಾಂಕ ನಮೂದು ಇರುವ ಶಾಲಾ ದಾಖಲಾತಿ ಪ್ರಮಾಣ ಪತ್ರ ನೀಡಬೇಕು. ಹೊಸ ನೋಂದಣಿಗೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಆಧಾರ್ ಕಾರ್ಡಿನ ಯಾವುದೇ ಕಡ್ಡಾಯ ತಿದ್ದುಪಡಿ ಉಚಿತ. ಇತರ ತಿದ್ದುಪಡಿಗೆ ರೂ. 50 ಮತ್ತು ವರ್ಣ ಮುದ್ರಣಕ್ಕೆ ರೂ. 30. ವಯಸ್ಸಿನ ದಾಖಲೆ ಏನೂ ಇಲ್ಲದವರು ಸೇವಾ ಕೇಂದ್ರದಲ್ಲಿ ಲಭ್ಯವಿರುವ ಅರ್ಜಿ ಪಡೆದು ದೃಢೀಕರಣದೊಂದಿಗೆ ನೋಂದಣಿಗೆ ಸಲ್ಲಿಸಬಹುದು ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ಪ್ರಬಂಧಕ ಆರ್.ಕೆ. ಬಾಲಚಂದ್ರ ತಿಳಿಸಿದ್ದಾರೆ.